ನಗರಗಳಿಗೆ ಫೆಡರಲ್ ಅನುದಾನ ಕಡಿತಗೊಳಿಸುವ ಟ್ರಂಪ್ ಕ್ರಮಕ್ಕೆ ತಡೆ

ಡೊನಾಲ್ಡ್ ಟ್ರಂಪ್ | Photo Credit : AP \ PTI
ವಾಷಿಂಗ್ಟನ್, ನ.22: ಸ್ಯಾನ್ ಫ್ರಾನ್ಸಿಸ್ಕೋ, ಲಾಸ್ ಏಂಜಲೀಸ್ ಮತ್ತು ನ್ಯೂಯಾರ್ಕ್ ಸೇರಿದಂತೆ ನಗರಗಳಿಗೆ ಅಮೆರಿಕಾದ ರಾಷ್ಟ್ರೀಯ ಭದ್ರತಾ ಇಲಾಖೆ ನೀಡುವ ಅನುದಾನಕ್ಕೆ ಏಕಪಕ್ಷೀಯ ಷರತ್ತು ವಿಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಕ್ರಮಗಳಿಗೆ ಅಮೆರಿಕಾದ ಎರಡು ಫೆಡರಲ್ ನ್ಯಾಯಾಧೀಶರು ತಡೆಯಾಜ್ಞೆ ವಿಧಿಸಿದ್ದಾರೆ.
ಕ್ಯಾಲಿಫೋರ್ನಿಯಾ, ವಾಷಿಂಗ್ಟನ್ ಮತ್ತು ಅರಿಝೋನಾದಲ್ಲಿ 25ಕ್ಕೂ ಹೆಚ್ಚು ನಗರಗಳಿಗೆ ರಾಷ್ಟ್ರೀಯ ಭದ್ರತಾ ಇಲಾಖೆಯ 350 ದಶಲಕ್ಷ ಡಾಲರ್ಗೂ ಹೆಚ್ಚು ಅನುದಾನ ಬಿಡುಗಡೆಗೆ ಏಕಪಕ್ಷೀಯ ಷರತ್ತು ವಿಧಿಸುವ ಟ್ರಂಪ್ ಆಡಳಿತದ ಕ್ರಮಕ್ಕೆ ಸ್ಯಾನ್ಜೋಸ್ ಜಿಲ್ಲಾ ನ್ಯಾಯಾಧೀಶರು ತಾತ್ಕಾಲಿಕ ತಡೆ ನೀಡಿದ್ದಾರೆ. ನ್ಯೂಯಾರ್ಕ್, ಬೋಸ್ಟನ್ ಹಾಗೂ ಇತರ ಹಲವು ನಗಗಳಿಗೆ 100 ದಶಲಕ್ಷ ಡಾಲರ್ಗೂ ಹೆಚ್ಚು ಅನುದಾನ ಬಿಡುಗಡೆಗೆ ಷರತ್ತು ವಿಧಿಸಿರುವ ಟ್ರಂಪ್ ಕ್ರಮಕ್ಕೆ ಚಿಕಾಗೋ ಜಿಲ್ಲಾ ನ್ಯಾಯಾಧೀಶರು ತಾತ್ಕಾಲಿಕ ತಡೆಯಾಜ್ಞೆ ವಿಧಿಸಿರುವುದಾಗಿ ವರದಿಯಾಗಿದೆ.
Next Story





