ಬೈಡನ್ ಅವರ `ಅಟೊಪೆನ್' ಸಹಿಯ ದಾಖಲೆ ಅನೂರ್ಜಿತ: ಟ್ರಂಪ್ ಘೋಷಣೆ

ಡೊನಾಲ್ಡ್ ಟ್ರಂಪ್ | Photo Credit : AP \ PTI
ವಾಷಿಂಗ್ಟನ್, ಡಿ.3: ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಅಟೊಪೆನ್ ಸಹಿಯನ್ನು ಹೊಂದಿರುವ ಎಲ್ಲಾ ಸರ್ಕಾರಿ ದಾಖಲೆಗಳು ಅನೂರ್ಜಿತ ಮತ್ತು ಪರಿಣಾಮಕಾರಿಯಾಗಿರುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಅಟೊಪೆನ್ ಎಂಬುದು ವ್ಯಕ್ತಿಯ ಸಹಿಯನ್ನು ನಿಖರವಾಗಿ ಪುನರಾವರ್ತಿಸಲು ಬಳಸುವ ಸಾಧನವಾಗಿದ್ದು ಈ ಹಿಂದೆ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಅಧ್ಯಕ್ಷರು ಬಳಸಿದ್ದಾರೆ.
`ಜೋಸೆಫ್ ಬೈಡನ್ ಆಡಳಿತದಲ್ಲಿ ಈಗ ಕುಖ್ಯಾತವಾಗಿರುವ ಮತ್ತು ಅನಧಿಕೃತವಾಗಿರುವ ಅಟೊ ಪೆನ್ ನಿಂದ ಸಹಿ ಹಾಕಲಾಗಿರುವ ಯಾವುದೇ ಅಥವಾ ಎಲ್ಲಾ ದಾಖಲೆಗಳು, ಘೋಷಣೆಗಳು, ಕಾರ್ಯ ನಿರ್ವಾಹಕ ಆದೇಶಗಳು, ಮೆಮೊರ್ಯಾಂಡ್ಗಳು ಅಥವಾ ಒಪ್ಪಂದಗಳು ಅನೂರ್ಜಿತವಾಗಿದೆ ಮತ್ತು ಪರಿಣಾಮಕಾರಿ ಆಗಿರುವುದಿಲ್ಲ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ `ಟ್ರುಥ್ ಸೋಶಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
Next Story





