ʼನಾನೊಬ್ಬ ಸರ್ವಾಧಿಕಾರಿʼ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಚ್ಚರಿ ಹೇಳಿಕೆ

ಡೊನಾಲ್ಡ್ ಟ್ರಂಪ್ | Photo Credit : PTI
ದಾವೋಸ್, ಜ.22: ಸ್ವಿಝರ್ಯ್ಲಾಂಡ್ನ ದಾವೋಸ್ನಲ್ಲಿ ನಡೆಯುತ್ತಿರುವ ಜಾಗತಿಕ ಆರ್ಥಿಕ ಶೃಂಗಸಭೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನನ್ನು `ಸರ್ವಾಧಿಕಾರಿ' ಎಂದು ಉಲ್ಲೇಖಿಸಿದ ಘಟನೆ ವರದಿಯಾಗಿದೆ.
`ದಾವೋಸ್ನಲ್ಲಿ ನಾವು ಉತ್ತಮ ಭಾಷಣ ಮಾಡಿದ್ದೇವೆ. ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿದ್ದೇವೆ. ಸಾಮಾನ್ಯವಾಗಿ ನನ್ನನ್ನು `ಭಯಾನಕ ಸರ್ವಾಧಿಕಾರಿಯ ರೀತಿಯ ವ್ಯಕ್ತಿ' ಎಂದು ವಿಮರ್ಶಿಸುತ್ತಾರೆ. ಹೌದು , ನಾನೊಬ್ಬ ಸರ್ವಾಧಿಕಾರಿ. ಕೆಲವೊಮ್ಮೆ ನಿಮಗೆ ಸರ್ವಾಧಿಕಾರಿಯ ಅಗತ್ಯವಿರುತ್ತದೆ' ಎಂದು ಟ್ರಂಪ್ ಹೇಳಿದ್ದಾರೆ. ಬಳಿಕ ತನ್ನ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ಟ್ರಂಪ್ ` ನನ್ನ ನಿರ್ಧಾರಗಳು ಸಿದ್ಧಾಂತಕ್ಕಿಂತ ಹೆಚ್ಚಾಗಿ ವಾಸ್ತವಿಕವಾದದಿಂದ ಪ್ರೇರಿತವಾಗಿದೆ. ಇದು ಸಂಪ್ರದಾಯವಾದಿ, ಉದಾರವಾದಿ ಅಥವಾ ಬೇರೆ ಯಾವುದೂ ಅಲ್ಲ. ಸಾಮಾನ್ಯ ಜ್ಞಾನವನ್ನು ಆಧರಿಸಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
Next Story





