ಇರಾನ್ ಗಲ್ಫ್ ನ ನೆರೆ ರಾಷ್ಟ್ರಗಳಿಗೆ ʼಶರಣಾಗಿದೆʼ, ಇಂದು ತುಂಬಾ ಕಠಿಣ ದಾಳಿ ನಡೆಯಬಹುದು: ಟ್ರಂಪ್ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ | Photo Credit : AP , PTI
ವಾಷಿಂಗ್ಟನ್: ಇರಾನ್ ಮಧ್ಯಪ್ರಾಚ್ಯದ ತನ್ನ ನೆರೆ ರಾಷ್ಟ್ರಗಳಿಗೆ ಕ್ಷಮೆಯಾಚಿಸಿ ಶರಣಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಜೊತೆಗೆ, ಇರಾನ್ ಮೇಲೆ ಇಂದು ‘ತುಂಬಾ ಕಠಿಣ’ ದಾಳಿ ನಡೆಯಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ತಮ್ಮ ‘ಟ್ರುತ್ ಸೋಶಿಯಲ್’ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.
ಇರಾನ್ ಈಗ ತನ್ನ ನೆರೆ ರಾಷ್ಟ್ರಗಳ ಮೇಲೆ ಗುಂಡಿನ ದಾಳಿ ನಡೆಸುವುದಿಲ್ಲ ಎಂಬ ಭರವಸೆಯನ್ನು ನೀಡಿದೆ ಎಂದು ಟ್ರಂಪ್ ವಾದಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಗಳ ಪರಿಣಾಮವಾಗಿ ಇರಾನ್ ಈ ಭರವಸೆ ನೀಡಲು ಒತ್ತಡಕ್ಕೆ ಒಳಗಾಗಿದೆ ಎಂದು ಅವರು ಹೇಳಿದ್ದಾರೆ.
ಇದರ ನಡುವೆ, ಇರಾನ್ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇರುವುದನ್ನೂ ಟ್ರಂಪ್ ಸೂಚಿಸಿದ್ದಾರೆ. ಇರಾನ್ ನ ‘ಕೆಟ್ಟ ನಡವಳಿಕೆ’ ಹಿನ್ನೆಲೆಯಲ್ಲಿ ಈಗವರೆಗೂ ಗುರಿಯಾಗಿಸದ ಪ್ರದೇಶಗಳು ಮತ್ತು ಜನರ ಗುಂಪುಗಳ ಮೇಲೂ ದಾಳಿ ನಡೆಸುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.





