ಲೆಬನಾನ್ನಲ್ಲಿ `ಸರ್ಜಿಕಲ್' ದಾಳಿ ಮಾತ್ರ ನಡೆಸುವಂತೆ ನೆತನ್ಯಾಹುಗೆ ಸೂಚನೆ: ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಎ.30: ಲೆಬನಾನ್ನಲ್ಲಿ ಸರ್ಜಿಕಲ್ ಮಿಲಿಟರಿ ದಾಳಿಯನ್ನು ಮಾತ್ರ ನಡೆಸಬೇಕು ಮತ್ತು ಯುದ್ಧದ ಪೂರ್ಣ ಪುನರಾರಂಭವನ್ನು ತಪ್ಪಿಸಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಸೂಚಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಆದೇಶವನ್ನು ಹೆಚ್ಚು ಎಚ್ಚರಿಕೆಯಿಂದ ನಿರ್ವಹಿಸಬೇಕು. ಕಟ್ಟಡಗಳನ್ನು ನಾಶಪಡಿಸಬಾರದು ಎಂದು ನೆತನ್ಯಾಹುಗೆ ಹೇಳಿದ್ದೇನೆ. ಅವರು ಅದನ್ನು ಮಾಡಲು ಸಾಧ್ಯವಿಲ್ಲ. ಇದು ಭಯಾನಕವಾಗಿದೆ ಮತ್ತು ಇಸ್ರೇಲ್ನ `ಇಮೇಜ್'ಗೆ ಹಾನಿ ತರುತ್ತದೆ' ಎಂದು ಟ್ರಂಪ್ ಹೇಳಿದ್ದಾರೆ. ಲೆಬನಾನ್ ಮತ್ತು ಅದರ ನಾಯಕತ್ವವನ್ನು ಶ್ಲಾಘಿಸಿದ ಟ್ರಂಪ್, ಇರಾನ್ ಮತ್ತು ಅದರ ಏಜೆಂಟ್ ಹಿಜ್ಬುಲ್ಲಾ ಲೆಬನಾನ್ ಅನ್ನು ನಾಶಗೊಳಿಸಿದೆ. ಆದರೆ ಚೇತರಿಸಿಕೊಂಡು ಮತ್ತೆ ಮೇಲೇರುವ ಲೆಬನಾನ್ನ ಸಾಮರ್ಥ್ಯದ ಬಗ್ಗೆ ತನಗೆ ವಿಶ್ವಾಸವಿದೆ ಎಂದು ಹೇಳಿರುವುದಾಗಿ `ಆಕ್ಸಿಯೋಸ್' ವರದಿ ಮಾಡಿದೆ.
Next Story




