ಉಕ್ರೇನಿಯನ್ನರ ಜೀವ ಉಳಿಸುವಂತೆ ಪುಟಿನ್ ರನ್ನು `ಕೋರಿದ' ಟ್ರಂಪ್

PC : PTI
ವಾಷಿಂಗ್ಟನ್: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ಅತ್ಯುತ್ತಮ ಮತ್ತು ಉತ್ಪಾದಕ ಚರ್ಚೆಯನ್ನು ನಡೆಸಿದ್ದು ಉಕ್ರೇನಿಯನ್ನರ ಜೀವಗಳನ್ನು ಉಳಿಸುವಂತೆ `ಕೋರಿದ್ದೇನೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.
`ಪುಟಿನ್ ಜತೆ ಅತ್ಯುತ್ತಮ ಚರ್ಚೆ ನಡೆಸಿದ್ದು ಈ ಭಯಾನಕ, ರಕ್ತಸಿಕ್ತ ಯುದ್ಧವು ಅಂತಿಮವಾಗಿ ಕೊನೆಗೊಳ್ಳುವ ಉತ್ತಮ ಅವಕಾಶವಿದೆ. ಆದರೆ ಈ ಕ್ಷಣದಲ್ಲಿ ಸಾವಿರಾರು ಉಕ್ರೇನಿಯನ್ ಯೋಧರು ರಶ್ಯದ ಮಿಲಿಟರಿಯಿಂದ ಸಂಪೂರ್ಣ ಸುತ್ತುವರಿಯಲ್ಪಟ್ಟಿದ್ದಾರೆ. ಅವರ ಜೀವವನ್ನು ಉಳಿಸುವಂತೆ ಅಧ್ಯಕ್ಷ ಪುಟಿನ್ ರನ್ನು `ಬಲವಾಗಿ ಕೋರುತ್ತೇನೆ'. ಇದು ಎರಡನೇ ಮಹಾಯುದ್ಧದ ಬಳಿಕದ ಭಯಾನಕ ಹತ್ಯಾಕಾಂಡವಾಗಲಿದ್ದು ಅವರೆಲ್ಲರಿಗೂ ದೇವರ ದಯೆ ಇರಲಿ' ಎಂದು ಟ್ರಂಪ್ ತನ್ನ ಸಾಮಾಜಿಕ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.
Next Story





