ಮಾನವ ಹಕ್ಕುಗಳ ಪಾಠ ಮಾಡಬೇಡಿ’ : ಫ್ರಾನ್ಸ್ ವಿರುದ್ಧ ಇರಾನ್ ಆಕ್ರೋಶ

ಅಬ್ಬಾಸ್ ಅರಘ್ಚಿ | Photo Credit : AP, PTI
ಟೆಹ್ರಾನ್: ಇಸ್ರೇಲಿ ಸೇನಾ ಕಾರ್ಯಾಚರಣೆಗಳಿಗೆ ಫ್ರಾನ್ಸ್ ನೀಡುತ್ತಿರುವ ಬೆಂಬಲವು ಮಾನವ ಹಕ್ಕುಗಳ ವಿಷಯದಲ್ಲಿ ಅವರ ನೈತಿಕ ಅಧಿಕಾರವನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಫ್ರಾನ್ಸ್ ನಂತಹ ದೇಶಗಳು 'ಮಾನವ ಹಕ್ಕುಗಳು' ಮತ್ತು ಅಂತರರಾಷ್ಟ್ರೀಯ ಕಾನೂನಿನ ಬಗ್ಗೆ ಜಗತ್ತಿಗೆ ಪಾಠ ಮಾಡುವುದನ್ನು ನಿಲ್ಲಿಸಬೇಕು. ನಿಮ್ಮ ಈ ಬೂಟಾಟಿಕೆಯು ಸ್ಪಷ್ಟವಾಗಿದೆ ಮತ್ತು ಮುಜುಗರ ತರಿಸುವಂತಿದೆ" ಎಂದು ಬರೆದುಕೊಂಡಿದ್ದಾರೆ.
"ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧಕ್ಕೆ ಮತ್ತು ಇರಾನ್ ಮೇಲಿನ ಆಕ್ರಮಣಕ್ಕೆ ನೀವು ನೀಡುತ್ತಿರುವ ಬೆಂಬಲವು, ನೀವು ಹೊಂದಿದ್ದೀರಿ ಎಂದು ನೀವೇ ಭಾವಿಸಿದ್ದ ನೈತಿಕತೆಯನ್ನು ಸಂಪೂರ್ಣವಾಗಿ ನಾಶಪಡಿಸಿದೆ" ಎಂದು ಅರಘ್ಚಿ ಹೇಳಿದ್ದಾರೆ.
Next Story




