ಕುವೈತ್ ತೈಲ ಸಂಸ್ಕರಣಾಗಾರಕ್ಕೆ ಡ್ರೋನ್ ದಾಳಿ

File Photo: AP
ಕುವೈತ್: ಅಲ್ ಅಹ್ಮದಿಯಲ್ಲಿರುವ ತೈಲ ಸಂಸ್ಕರಣಾಗಾರಕ್ಕೆ ಶುಕ್ರವಾರ ಬೆಳಗಿನ ಜಾವ ಡ್ರೋನ್ ದಾಳಿ ನಡೆದಿದೆ ಎಂದು ಕುವೈತ್ ನ ಸರಕಾರಿ ಸುದ್ದಿ ಸಂಸ್ಥೆ ತಿಳಿಸಿದೆ.
ಕುವೈತ್ ಪೆಟ್ರೋಲಿಯಂ ಕಾರ್ಪೊರೇಷನ್ ನಿರ್ವಹಿಸುವ ಈ ಸಂಸ್ಕರಣಾಗಾರದಲ್ಲಿ ದಾಳಿಯಿಂದ ಹಲವು ಕಾರ್ಯಾಚರಣಾ ಘಟಕಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಘಟನೆಯಲ್ಲಿ ಯಾವುದೇ ಉದ್ಯೋಗಿಗಳಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವಾ ದಳಗಳನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಲಾಗಿದ್ದು, ಬೆಂಕಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಇದಕ್ಕೂ ಮೊದಲು, ಕುವೈತ್ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳ ಸಾಧ್ಯತೆ ಕುರಿತು ಎಚ್ಚರಿಕೆ ನೀಡಲಾಗಿತ್ತು.
Next Story




