ಲೆಬನಾನ್ ಮೇಲಿನ ದಾಳಿಗೆ ಪ್ರತ್ಯುತ್ತರವಾಗಿ ಇಸ್ರೇಲ್ ನ ವಾಯುನೆಲೆಗೆ ಡ್ರೋನ್ ದಾಳಿ: ಹಿಝ್ಬುಲ್ಲಾ ಹೇಳಿಕೆ

PC: x.com/AJEnglish
ಬೈರೂತ್/ಜೆರುಸಲೇಮ್: ಲೆಬನಾನ್ನ ಸಶಸ್ತ್ರ ಸಂಘಟನೆ ಹಿಝ್ಬುಲ್ಲಾ ಉತ್ತರ ಇಸ್ರೇಲ್ ನಲ್ಲಿರುವ ರಾಮತ್ ಡೇವಿಡ್ ವಾಯುನೆಲೆಯ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ಮಂಗಳವಾರ ಹೇಳಿಕೊಂಡಿದೆ ಎಂದು Aljazeera ವರದಿ ಮಾಡಿದೆ.
‘ಡ್ರೋನ್ಗಳ ಸಮೂಹ’ವನ್ನು ಬಳಸಿಕೊಂಡು ಮುಂಜಾನೆ ವೇಳೆ ದಾಳಿ ನಡೆಸಲಾಗಿದೆ. ವಾಯುನೆಲೆಯಲ್ಲಿನ ರಾಡಾರ್ ತಾಣಗಳು ಮತ್ತು ನಿಯಂತ್ರಣ ಕೊಠಡಿಗಳನ್ನು ಗುರಿಯಾಗಿಸಲಾಗಿದೆ ಎಂದು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.
ಲೆಬನಾನ್ನ ಹಲವು ಪ್ರದೇಶಗಳಲ್ಲಿ ಇಸ್ರೇಲ್ ನಡೆಸಿದ ದಾಳಿಗಳಿಗೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. ದಾಳಿಯಿಂದ ಉಂಟಾದ ಹಾನಿ ಕುರಿತು ತಕ್ಷಣದ ಮಾಹಿತಿ ಲಭ್ಯವಾಗಿಲ್ಲ. ಇಸ್ರೇಲ್ ಅಧಿಕಾರಿಗಳಿಂದಲೂ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ.
Next Story





