ಇಸ್ರೇಲ್ ವಿಮಾನ ನಿಲ್ದಾಣದತ್ತ ಹೌದಿಗಳಿಂದ ಡ್ರೋನ್ ದಾಳಿ

File Photo : Ronen Zvulun/Reuters
ಜೆರುಸಲೇಂ, ಸೆ.7: ದಕ್ಷಿಣ ಇಸ್ರೇಲ್ನ ರಮೋನ್ ವಿಮಾನ ನಿಲ್ದಾಣದತ್ತ ರವಿವಾರ ಯೆಮನ್ನ ಹೌದಿ ಗುಂಪು ಡ್ರೋನ್ ದಾಳಿ ನಡೆಸಿದ್ದು ಓರ್ವ ವ್ಯಕ್ತಿ ಗಾಯಗೊಂಡಿರುವುದಾಗಿ ಇಸ್ರೇಲ್ನ ಮೂಲಗಳು ಹೇಳಿವೆ.
ವಿಮಾನ ನಿಲ್ದಾಣದ ಆಗಮನದ ಹಾಲ್ಗೆ ಡ್ರೋನ್ ಅಪ್ಪಳಿಸಿದ ಬಳಿಕ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರವಿವಾರ ಮೂರು ಡ್ರೋನ್ಗಳನ್ನು ಹೌದಿಗಳು ಪ್ರಯೋಗಿಸಿದ್ದು ಎರಡನ್ನು ಇಸ್ರೇಲ್ನ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ.
ಧ್ವಂಸಗೊಂಡ ಡ್ರೋನ್ನ ಚೂರುಗಳು ಬಡಿದು ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ದಾಳಿಯ ಬಳಿಕ ಹೌದಿಗಳ ರಾಜಕೀಯ ವಿಭಾಗದ ಅಧಿಕಾರಿ `ನಿಜವಾದ ಪ್ರತೀಕಾರ ಇದುವರೆಗೆ ಆರಂಭಗೊಂಡಿಲ್ಲ. ಇನ್ನೂ ಕೆಟ್ಟದ್ದು ನಿಮಗಾಗಿ ಕಾಯುತ್ತಿದೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವುದಾಗಿ ವರದಿಯಾಗಿದೆ.
Next Story





