ಆಕ್ರಮಿತ ಖೆರ್ಸಾನ್ ಪ್ರದೇಶದಲ್ಲಿ ಡ್ರೋನ್ ದಾಳಿಯಲ್ಲಿ 24 ಮೃತ್ಯು: ರಶ್ಯ

Photo Credit : AP \ PTI
ಮಾಸ್ಕೋ, ಜ.1: ಉಕ್ರೇನ್ನಿಂದ ವಶಕ್ಕೆ ಪಡೆದಿರುವ ಖೆರ್ಸಾನ್ ಪ್ರದೇಶದ ಮೇಲೆ ಬುಧವಾರ ತಡರಾತ್ರಿ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಅಧಿಕ ನಾಗರಿಕರು ಗಾಯಗೊಂಡಿರುವುದಾಗಿ ರಶ್ಯದ ಅಧಿಕಾರಿಗಳು ಹೇಳಿದ್ದಾರೆ.
ಕಪ್ಪು ಸಮುದ್ರದ ಕರಾವಳಿಯ ಖೋರ್ಟಿ ಗ್ರಾಮದಲ್ಲಿ ಕೆಫೆ ಮತ್ತು ಹೋಟೆಲ್ ಮೇಲೆ ದಾಳಿ ನಡೆದಿದ್ದು, ಹೊಸ ವರ್ಷದ ಸಂಭ್ರಮಾಚರಣೆಗೆ ಸೇರಿದ್ದ ಕನಿಷ್ಠ 24 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಒಂದು ಮಗುವೂ ಸೇರಿದೆ.
ದಾಳಿಯ ಬಳಿಕ ಬೆಂಕಿ ಹರಡಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ಗುರುವಾರ ಬೆಳಿಗ್ಗೆ ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಖೆರ್ಸಾನ್ ನಲ್ಲಿ ರಶ್ಯ ನೇಮಿಸಿರುವ ಮುಖ್ಯಾಧಿಕಾರಿ ವ್ಲಾದಿಮಿರ್ ಸಾಲ್ದೊ ಹೇಳಿದ್ದಾರೆ.
Next Story





