ಪೆರುವಿನಲ್ಲಿ ಭೂಕಂಪ: ಒಬ್ಬರು ಮೃತ್ಯು; 36 ಮಂದಿಗೆ ಗಾಯ

PC ; X \ @volcaholic1
ಲಿಮಾ: ಪೆರುವಿನಲ್ಲಿ ರವಿವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದ್ದು ಕನಿಷ್ಠ ಒಬ್ಬ ಸಾವನ್ನಪ್ಪಿದ್ದು ಇತರ 36 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ರಾಜಧಾನಿ ಲಿಮಾದಿಂದ ಸುಮಾರು 30 ಕಿ.ಮೀ ದೂರವಿರುವ ಬಂದರು ನಗರ ಕಲ್ಲಾವೊದಲ್ಲಿ ಕೇಂದ್ರೀಕೃತಗೊಂಡಿದ್ದ ಭೂಕಂಪನದಿಂದ ಭೂಕುಸಿತ ಸಂಭವಿಸಿದೆ. ಲಿಮಾ ನಗರದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಗೋಡೆಯೊಂದು ಉರುಳಿಬಿದ್ದು ಚಾಲಕ ಸಾವನ್ನಪ್ಪಿದ್ದಾನೆ. ಈ ಪ್ರದೇಶದಲ್ಲಿ ಇತರ 36 ಮಂದಿ ಗಾಯಗೊಂಡಿರುವುದಾಗಿ ರಾಷ್ಟ್ರೀಯ ಪೊಲೀಸ್ ಇಲಾಖೆ ಹೇಳಿದೆ. ಲಿಮಾದಲ್ಲಿ ನಡೆಯುತ್ತಿದ್ದ ಪ್ರಮುಖ ಫುಟ್ ಬಾಲ್ ಪಂದ್ಯಾಟವನ್ನು ಅಮಾನತುಗೊಳಿಸಲಾಗಿದೆ ಮತ್ತು ನಗರದ ಸುರಂಗ ಮಾರ್ಗ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
Whoahh! The M5.6 earthquake less than an hour ago has triggered landslides on the Costa Verde in Lima, Peru pic.twitter.com/zBNCkP09Xr
— Volcaholic (@volcaholic1) June 15, 2025
Next Story







