Pakistan| ಬಲೂಚಿಸ್ತಾನದಲ್ಲಿ 6.0 ತೀವ್ರತೆಯ ಭೂಕಂಪನ

ಸಾಂದರ್ಭಿಕ ಚಿತ್ರ (AI Generated)
ಬಲೂಚಿಸ್ತಾನ (ಪಾಕಿಸ್ತಾನ): ದಕ್ಷಿಣ ಪಾಕಿಸ್ತಾನ ಬಳಿಯ ಬಲೂಚಿಸ್ತಾನದ ಖುಝ್ದರ್ ನಲ್ಲಿ ಶನಿವಾರ 6.0 ತೀವ್ರತೆಯ ಭೂಕಂಪನ ಸಂಭವಿಸಿದೆ. ದಕ್ಷಿಣ ಸುರಾಬ್ ನಿಂದ 95 ಕಿಮೀ ದೂರದಲ್ಲಿ ಭೂಕಂಪನ ಕೇಂದ್ರಬಿಂದುವಿತ್ತು ಎಂದು ಯೂರೋಪಿಯನ್-ಮೆಡಿಟರೇನಿಯನ್ ಸೆಸ್ಮಾಲಾಜಿಕಲ್ ಸೆಂಟರ್ ಹೇಳಿದೆ.
10 ಕಿಮೀ ಆಳದಲ್ಲಿ ಈ ಭೂಕಂಪನ ಸಂಭವಿಸಿದೆ ದಿ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸಸ್ ತಿಳಿಸಿದೆ.
ಭೂಕಂಪನದ ಕುರಿತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
Next Story




