ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ : ದೆಹಲಿಯಲ್ಲೂ ಕಂಪಿಸಿದ ಭೂಮಿ

ಸಾಂದರ್ಭಿಕ ಚಿತ್ರ (PTI)
ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಬುಧವಾರ ನಸುಕಿನಲ್ಲಿ ತೀವ್ರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.6ರಷ್ಟಿತ್ತು ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಭೂಕಂಪ 121 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಯೂರೋಪಿಯನ್-ಮೆಡಿಟರೇನಿಯನ್ ಭೂಕಂಪ ಕೇಂದ್ರ (ಇಎಂಎಸ್ಸಿ) ಹೇಳಿದೆ. ಇದರ ಕೇಂದ್ರ ಬಿಂದು 1.08 ಲಕ್ಷ ಜನಸಂಖ್ಯೆ ಹೊಂದಿದ ಬಘ್ಲಾನ್ ನಗರದಿಂದ 164 ಕಿಲೋಮೀಟರ್ ಪೂರ್ವಕ್ಕೆ ಇತ್ತು ಎಂದು ಸ್ಪಷ್ಟಪಡಿಸಿದೆ. ಮೊದಲು ಇದನ್ನು 6.4 ತೀವ್ರತೆಯ ಭೂಕಂಪ ಎಂದು ಪ್ರಕಟಿಸಲಾಗಿತ್ತು. ಆ ಬಳಿಕ ಪರಿಷ್ಕರಿಸಿ 5.6 ಎಂದು ಹೇಳಲಾಗಿದೆ.
ದೆಹಲಿ-ಎನ್ಸಿಆರ್ ಪ್ರದೇಶದಲ್ಲೂ ಲಘು ಕಂಪನದ ಅನುಭವವಾಗಿದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಎಕ್ಸ್ ನಲ್ಲಿ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಏಷ್ಯಾ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಸರಣಿ ಭೂಕಂಪಗಳಿಗೆ ಇದು ಇತ್ತೀಚಿನ ಸೇರ್ಪಡೆಯಾಗಿದೆ.
Next Story