ಪೂರ್ವ ಜೆರುಸಲೇಂನಲ್ಲಿ ವಿಶ್ವಸಂಸ್ಥೆಯ ನೆರವು ಏಜೆನ್ಸಿ ಕಟ್ಟಡ ಧ್ವಂಸ

Photo Credit : aljazeera.com
ಜೆರುಸಲೇಂ, ಜ.20: ಫೆಲೆಸ್ತೀನಿಯರಿಗೆ ನೆರವು ಒದಗಿಸುತ್ತಿರುವ ಮಾನವೀಯ ಸಂಘಟನೆಗಳ ಮೇಲಿನ ಹಿಡಿತವನ್ನು ಇಸ್ರೇಲ್ ಬಿಗಿಗೊಳಿಸಿದ್ದು, ಪೂರ್ವ ಜೆರುಸಲೇಂನಲ್ಲಿರುವ ವಿಶ್ವಸಂಸ್ಥೆಯ ಪರಿಹಾರ ಕಾರ್ಯಗಳ ಏಜೆನ್ಸಿ (ಯುಎನ್ಆರ್ಡಬ್ಲ್ಯುಎ) ಕಚೇರಿಯನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಆರಂಭಿಸಿದೆ.
ಶೇಖ್ ಜರಾಹ್ ಪ್ರದೇಶದಲ್ಲಿರುವ ಕಚೇರಿಯ ಸಾಮಗ್ರಿಗಳನ್ನು ವಶಪಡಿಸಿಕೊಂಡು ಸಿಬ್ಬಂದಿಯನ್ನು ಬಲವಂತವಾಗಿ ಹೊರದಬ್ಬಲಾಗಿದೆ ಎಂದು ಯುಎನ್ಆರ್ಡಬ್ಲ್ಯುಎ ತಿಳಿಸಿದೆ. ಇದು ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಸವಲತ್ತುಗಳ ಗಂಭೀರ ಉಲ್ಲಂಘನೆ ಎಂದು ಹೇಳಿದೆ.
ಯುಎನ್ಆರ್ಡಬ್ಲ್ಯುಎ ಹಮಾಸ್ ಜೊತೆ ನಂಟು ಹೊಂದಿದೆ ಎಂಬ ಆರೋಪವನ್ನು ಇಸ್ರೇಲ್ ದೀರ್ಘಕಾಲದಿಂದ ಮಾಡುತ್ತಿದ್ದು, ಸಂಸ್ಥೆ ಅದನ್ನು ನಿರಾಕರಿಸಿದೆ. ಇಸ್ರೇಲ್ ಸಂಸತ್ ಕಳೆದ ವರ್ಷ ಅಂಗೀಕರಿಸಿದ ಕಾನೂನಿನಡಿ ಸಂಸ್ಥೆಯನ್ನು ನಿಷೇಧಿಸಲಾಗಿದೆ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.
Next Story





