ಎಬೋಲಾ | ಕಾಂಗೋದಲ್ಲಿ 1,500 ದಾಟಿದ ಮೃತರ ಸಂಖ್ಯೆ

Photo Credit : AP
ಬುನಿಯಾ, ಜು.31: ತೀವ್ರವಾಗಿ ಹರಡುತ್ತಿರುವ ಎಬೋಲಾ ಸಾಂಕ್ರಾಮಿಕ ರೋಗಕ್ಕೆ ಪೂರ್ವ ಕಾಂಗೋದಲ್ಲಿ 1,500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.
ಸುಮಾರು ಒಂದು ವಾರದಲ್ಲೇ ಸಾವಿನ ಸಂಖ್ಯೆ 50% ರಷ್ಟು ಹೆಚ್ಚಾಗಿದೆ. ಮಂಗಳವಾರದ ವೇಳೆಗೆ ಒಟ್ಟು 3,442 ಪ್ರಕರಣಗಳು ದಾಖಲಾಗಿದ್ದು, 1,521 ಮಂದಿ ಮೃತಪಟ್ಟಿದ್ದಾರೆ. ಈ ರೋಗದ ಹರಡುವಿಕೆಗೆ `ಬುಂಡಿಬುಗ್ಯೋ' ವೈರಸ್ ಕಾರಣವೆಂದು ಹೇಳಲಾಗಿದ್ದು, ಇದಕ್ಕೆ ಇನ್ನೂ ಯಾವುದೇ ಅನುಮೋದಿತ ಲಸಿಕೆಗಳು ಅಥವಾ ಚಿಕಿತ್ಸೆಗಳು ಲಭ್ಯವಿಲ್ಲ.
Next Story




