ಈಜಿಪ್ಟ್ | ಮಾನವ ಹಕ್ಕು ಕಾರ್ಯಕರ್ತ ಅಬ್ದೆಲ್ ಫತಾಗೆ ಅಧ್ಯಕ್ಷರಿಂದ ಕ್ಷಮಾದಾನ

ಅಲಾ ಅಬ್ದುಲ್-ಫತ್ತಾಹ್ | PC : X \ @FreedomForAlaa
ಕೈರೋ, ಸೆ.22: ಈಜಿಪ್ಟಿಯನ್ ಬ್ರಿಟಿಷ್ ಬ್ಲಾಗರ್, ಪ್ರಜಾಪ್ರಭುತ್ವ ಪ್ರತಿಪಾದಕ ಮತ್ತು ಪ್ರಮುಖ ಮಾನವ ಹಕ್ಕು ಕಾರ್ಯಕರ್ತ ಅಲಾ ಅಬ್ದೆಲ್ ಫತಾಗೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾ ಅಲ್-ಸಿಸಿ ಕ್ಷಮಾದಾನ ನೀಡಿರುವುದಾಗಿ ವರದಿಯಾಗಿದೆ.
43 ವರ್ಷದ ಅಬ್ದೆಲ್ ಫತಾ ಸುಮಾರು 10 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. 2021ರ ಡಿಸೆಂಬರ್ನಲ್ಲಿ ಕೈದಿಯೊಬ್ಬನ ಸಾವಿನ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿರುವುದಕ್ಕಾಗಿ 5 ವರ್ಷದ ಜೈಲು ಶಿಕ್ಷೆಯೂ ಇದರಲ್ಲಿ ಸೇರಿದೆ. ತನ್ನ ಬಂಧನದ ವಿರುದ್ಧ ಸೆಪ್ಟಂಬರ್ 11ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇವರ ಬಿಡುಗಡೆಗಾಗಿ ಆಗ್ರಹಿಸಿ ಸರಣಿ ಅಭಿಯಾನಗಳು ನಡೆದಿದ್ದವು ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಈಜಿಪ್ಟ್ ಅಧ್ಯಕ್ಷರ ಮೇಲೆ ಒತ್ತಡ ಹೇರಿದ್ದರು.
Next Story





