ಬಾಂಗ್ಲಾದೇಶದಲ್ಲಿ ಮುಂದಿನ ಫೆಬ್ರವರಿಯಲ್ಲಿ ಚುನಾವಣೆ: ವರದಿ

PC: x.com/firstpost
ಢಾಕಾ, ಆ.6: ದೇಶದಲ್ಲಿ ಮುಂದಿನ ವರ್ಷದ ಫೆಬ್ರವರಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ಘೋಷಿಸಿದ್ದಾರೆ.
ಶೇಖ್ ಹಸೀನಾ ನೇತೃತ್ವದ ಸರಕಾರ ಪದಚ್ಯುತಗೊಂಡ ವಾರ್ಷಿಕ ದಿನವಾದ ಆಗಸ್ಟ್ 5ರಂದು ಟಿವಿ ವಾಹಿನಿಯ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಯೂನುಸ್ ` ಮುಂದಿನ ವರ್ಷ ಫೆಬ್ರವರಿಯಲ್ಲಿ ರಮಝಾನ್ ನ ಆರಂಭಕ್ಕೂ ಮುನ್ನ ಚುನಾವಣೆಗೆ ದಿನಾಂಕ ನಿಗದಿಗೊಳಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಔಪಚಾರಿಕ ಪತ್ರ ಬರೆಯುವುದಾಗಿ' ಹೇಳಿದ್ದಾರೆ.
ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಲು ನಾಳೆಯಿಂದಲೇ ಮಾನಸಿಕ ಸಿದ್ಧತೆ ಮತ್ತು ಸಾಂಸ್ಥಿಕ ವ್ಯವಸ್ಥೆಗಳನ್ನು ಪ್ರಾರಂಭಿಸುತ್ತೇವೆ. ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ, ಭರವಸೆಗಳಲ್ಲಿ, ವಾಗ್ದಾನಗಳಲ್ಲಿ ಮತ್ತು ಯೋಜನೆಗಳಲ್ಲಿ ಯುವಜನರನ್ನು ಮತ್ತು ಮಹಿಳೆಯರನ್ನು ಸೇರಿಸಿಕೊಳ್ಳುವಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ. ಬಾಂಗ್ಲಾದೇಶವನ್ನು ಬದಲಾಯಿಸಿದ ಯುವಜನತೆ ವಿಶ್ವವನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿದ್ದಾರೆ' ಎಂದು ಯೂನುಸ್ ಹೇಳಿದ್ದಾರೆ.





