ಯುದ್ಧದ ಸಮಯದಲ್ಲಿ ಚುನಾವಣೆ ಸೂಕ್ತವಲ್ಲ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

Photo Credit : AP
ಕೀವ್, ಆ.23: ರಶ್ಯದ ಆಕ್ರಮಣದ ವಿರುದ್ಧ ಹೋರಾಡುತ್ತಿರುವಾಗ ಉಕ್ರೇನ್ನಲ್ಲಿ ಚುನಾವಣೆ ನಡೆಸುವುದು ತುಂಬಾ ಅಪಾಯಕಾರಿ ಎಂದು ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ರವಿವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಝೆಲೆನ್ಸ್ಕಿ ರಕ್ಷಣಾ ಸಚಿವ ಮೈಖೈಲೋ ಫೆಡೋರೊವ್ ಅವರನ್ನು ಇತ್ತೀಚೆಗೆ ವಜಾಗೊಳಿಸಿದ ನಂತರ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟಿಸಿದ್ದರು.
`ಇಂತಹ ಯುದ್ಧದ ಸಮಯದಲ್ಲಿ ಚುನಾವಣೆ ನಡೆಸುವುದು ದೊಡ್ಡ ಅಪಾಯ ಎಂದು ನಾನು ಭಾವಿಸುತ್ತೇನೆ. ಈ ಸಮಯದಲ್ಲಿ ಚುನಾವಣೆ ನಡೆಸುವುದು ದೇಶಕ್ಕೆ ಸುನಾಮಿಯಂತಾಗಿದ್ದು, ಉಕ್ರೇನ್ ಅನ್ನು ವಿಭಜಿಸುತ್ತದೆ. ರಶ್ಯದ ಪಡೆಗಳ ವಿರುದ್ಧ ಹೋರಾಡುವುದರ ಮೇಲೆ ದೇಶವು ಗಮನ ಹರಿಸುತ್ತಿರುವುದರಿಂದ, ಸಮರಸೇನಾ ಕಾನೂನಿನ ಅಡಿಯಲ್ಲಿ ಉಕ್ರೇನ್ನಲ್ಲಿ ಚುನಾವಣೆಯನ್ನು ಅಮಾನತುಗೊಳಿಸಲಾಗಿದೆ. ಈ ನಿರ್ಧಾರಕ್ಕೆ ದೇಶದ ಜನರಿಂದ ವ್ಯಾಪಕ ಬೆಂಬಲವೂ ಇದೆ ' ಎಂದು ಝೆಲೆನ್ಸ್ಕಿ ಪ್ರತಿಪಾದಿಸಿದ್ದಾರೆ.
Next Story




