ಭಾರತದಲ್ಲಿ ಸ್ಟಾರ್ಲಿಂಕ್ ಇಂಟರ್ನೆಟ್ ಆರಂಭಿಸಲು ಸಿದ್ಧ: ಮಸ್ಕ್

ಎಲಾನ್ ಮಸ್ಕ್ | Photo Credit : X \ @Eloncommentary1
ವಾಷಿಂಗ್ಟನ್, ಡಿ.1: ಈಗಾಗಲೇ 150 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಪೇಸ್ಎಕ್ಸ್ ಸಂಸ್ಥೆಯ ಕಡಿಮೆ ವೆಚ್ಚದ, ವಿಶ್ವಾಸಾರ್ಹ ಸ್ಟಾರ್ಲಿಂಕ್ ಇಂಟರ್ನೆಟ್ ವ್ಯವಸ್ಥೆಯನ್ನು ಭಾರತದಲ್ಲಿ ಆರಂಭಿಸಲು ತಾನು ಉತ್ಸುಕನಾಗಿರುವುದಾಗಿ ಸ್ಪೇಸ್ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.
ಹೂಡಿಕೆದಾರ ಮತ್ತು ಉದ್ಯಮಿ ನಿಖಿಲ್ ಕಾಮತ್ ಅವರೊಂದಿಗೆ `ಪೀಪಲ್ ಆಫ್ ಡಬ್ಲ್ಯೂಟಿಎಫ್' ಪೋಡ್ಕಾಸ್ಟ್ನಲ್ಲಿ ಮಾತನಾಡಿದ ಎಲಾನ್ ಮಸ್ಕ್ ` ಸ್ಟಾರ್ಲಿಂಕ್ನ ಶಕ್ತಿಯು ಭೂಮಿಯ ಮೇಲ್ಮೈಗೆ ತುಲನಾತ್ಮಕವಾಗಿ ಹತ್ತಿರವಿರುವ ಕಕ್ಷೆಯಲ್ಲಿರುವ ಸಾವಿರಾರು ಉಪಗ್ರಹಗಳಲ್ಲಿದೆ. ಇದು ಹೈಸ್ಪೀಡ್, ಕಡಿಮೆ ಸುಪ್ತತೆಯ(ಕನಿಷ್ಠ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಡೇಟಾ ಸಂದೇಶ ರವಾನೆ) ಸಂಪರ್ಕ ಕಲ್ಪಿಸುತ್ತಿದ್ದು ಗ್ರಾಮೀಣ ಸಂಪರ್ಕಕ್ಕೆ ಸಹಾಯ ಮಾಡುತ್ತದೆ' ಎಂದು ಮಸ್ಕ್ ಹೇಳಿದ್ದಾರೆ.
Next Story





