ಯುದ್ಧ ಭುಗಿಲೆದ್ದರೆ ಇಂಗ್ಲೆಂಡ್ ಗೆಹೋಗುತ್ತೇನೆ: ಪಾಕ್ ಸಂಸದನ ಹೇಳಿಕೆ ವೈರಲ್

ಅಫ್ಜಲ್ ಖಾನ್ ಮರ್ವಾತ್ | PC : X
ಇಸ್ಲಾಮಾಬಾದ್: ಒಂದು ವೇಳೆ ಭಾರತದ ಜೊತೆ ಯುದ್ಧ ಭುಗಿಲೆದ್ದರೆ ಇಂಗ್ಲೆಂಡಿಗೆ ಓಡಿ ಹೋಗುವುದಾಗಿ ಪಾಕಿಸ್ತಾನದ ಸಂಸದ ಶೇರ್ ಅಫ್ಜಲ್ ಖಾನ್ ಮರ್ವಾತ್ ನೀಡಿರುವ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಒಂದು ವೇಳೆ ಯುದ್ಧ ಭುಗಿಲೆದ್ದರೆ ಭಾರತದ ವಿರುದ್ಧ ಆಯುಧ ಕೈಗೆತ್ತಿಕೊಳ್ಳುವಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅಫ್ಜಲ್ ಖಾನ್ `ಯುದ್ಧ ಭುಗಿಲೆದ್ದರೆ ಇಂಗ್ಲೆಂಡಿಗೆ ಹೋಗುತ್ತೇನೆ' ಎಂದುತ್ತರಿಸಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾದ ಅಫ್ಜಲ್ ಮಾಜಿ ಪ್ರಧಾನಿ ಇಮ್ರಾನ್ಖಾನ್ ಅವರ ನಿಕಟವರ್ತಿಯಾಗಿದ್ದಾರೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ಕಡಿಮೆಗೊಳಿಸುವ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ಪ್ರಧಾನಿ ನರೇಂದ್ರ ಮೋದಿಯನ್ನು ಆಗ್ರಹಿಸುವಿರಾ ಎಂಬ ಪ್ರಶ್ನೆಗೆ ಅಫ್ಜಲ್ ಖಾನ್ ` ನಾನು ಹೇಳಿದೊಡನೆ ಹಿಂದೆ ಸರಿಯಲು ಮೋದಿಯೇನು ನನ್ನ ಚಿಕ್ಕಮ್ಮನ ಮಗನೇ ? ಎಂದು ಉತ್ತರಿಸಿರುವುದಾಗಿ ವರದಿಯಾಗಿದೆ.
ಇಸ್ರೇಲ್ನ ವಿಮಾನ ನಿಲ್ದಾಣದತ್ತ ಹೌದಿಗಳ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ
ಟೆಲ್ಅವೀವ್: ಯೆಮನ್ನಿಂದ ಹೌದಿಗಳು ರವಿವಾರ ಪ್ರಯೋಗಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯು ಇಸ್ರೇಲ್ನ ಬೆನ್ ಗ್ಯುರಿಯೋನ್ ವಿಮಾನ ನಿಲ್ದಾಣದ ಬಳಿ ಅಪ್ಪಳಿಸಿದ್ದು ಕೆಲಹೊತ್ತು ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕ್ಷಿಪಣಿ ದಾಳಿಯಿಂದಾಗಿ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಗೆ ಹಾನಿಯಾಗಿದೆ. ಕ್ಷಿಪಣಿಯು 4 ಪದರಗಳ ವಾಯು ರಕ್ಷಣಾ ವ್ಯವಸ್ಥೆಯ ಎಡೆಯಿಂದ ನುಸುಳಿಕೊಂಡು ವಿಮಾನ ನಿಲ್ದಾಣದ ಸಂಪರ್ಕ ರಸ್ತೆಯ ಬಳಿ ಅಪ್ಪಳಿಸಿದಾಗ ನೆಲದಲ್ಲಿ 25 ಮೀಟರ್ ಆಳದ ಕುಳಿಯನ್ನು ಸೃಷ್ಟಿಸಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲು ಹಳಿಗೂ ಹಾನಿಯಾಗಿರುವುದರಿಂದ ರೈಲುಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರ ಟರ್ಮಿನಲ್ ಬಳಿ ಹೊಗೆಯ ಕಾರ್ಮೋಡ ಆಗಸಕ್ಕೆ ವ್ಯಾಪಿಸುತ್ತಿರುವ ದೃಶ್ಯದ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ. ವಿಮಾನ ನಿಲ್ದಾಣದ ಪರಿಧಿಯೊಳಗಿನ ಸಂಪರ್ಕ ರಸ್ತೆಗೆ ಕ್ಷಿಪಣಿ ಅಪ್ಪಳಿಸುವ ಹಾಗೂ ಕ್ಷಿಪಣಿಯ ಭಗ್ನಾವಶೇಷಗಳು ಪಕ್ಕದ ರಸ್ತೆಗಳಲ್ಲಿ ಹರಡಿಕೊಂಡಿರುವ ವೀಡಿಯೊ ವೈರಲ್ ಆಗಿದೆ. ಇದರೊಂದಿಗೆ ಸತತ ಮೂರನೇ ದಿನ ಹೌದಿಗಳು ಇಸ್ರೇಲ್ನತ್ತ ಕ್ಷಿಪಣಿ ದಾಳಿ ನಡೆಸಿದಂತಾಗಿದೆ.
ಕ್ಷಿಪಣಿಯನ್ನು ತುಂಡರಿಸುವ ಹಲವು ಪ್ರಯತ್ನಗಳು ವಿಫಲಗೊಂಡ ಬಳಿಕ ಕ್ಷಿಪಣಿಯು ವಿಮಾನ ನಿಲ್ದಾಣದ ಪರಿಧಿಯೊಳಗೆ ಅಪ್ಪಳಿಸಿದೆ. ಮಹಿಳೆ ಸೇರಿದಂತೆ 4 ಮಂದಿಗೆ ಗಾಯಗಳಾಗಿದ್ದು ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







