ಅಮೆರಿಕದ ಸೈನಿಕರನ್ನು ಸೆರೆಹಿಡಿದಿದ್ದೇವೆ ಎಂಬ ಇರಾನ್ ಹೇಳಿಕೆ ಸುಳ್ಳು: CENTCOM

ಸಾಂದರ್ಭಿಕ ಚಿತ್ರ | Photo Credit : aljazeera.com
ವಾಷಿಂಗ್ಟನ್, ಮಾ. 8: ಇರಾನ್ ಯಾವುದೇ ಅಮೆರಿಕದ ಸೈನಿಕರನ್ನು ಸೆರೆಹಿಡಿದಿಲ್ಲ ಎಂದು ಅಮೆರಿಕದ ಕೇಂದ್ರ ಕಮಾಂಡ್ (CENTCOM) ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಇರಾನ್ ನ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥರು ಇರಾನ್ ಅಮೆರಿಕದ ಸೈನಿಕರನ್ನು ಸೆರೆಹಿಡಿದಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಈ ಕುರಿತು CENTCOM ಪ್ರತಿಕ್ರಿಯೆ ನೀಡಿದೆ.
‘ಅಮೆರಿಕನ್ ಸೈನಿಕರನ್ನು ಸೆರೆಹಿಡಿದಿರುವುದಾಗಿ ಇರಾನ್ ಆಡಳಿತ ಮಾಡಿರುವ ಹೇಳಿಕೆಗಳು ಅದರ ಸುಳ್ಳು ಮತ್ತು ವಂಚನೆಗಳಿಗೆ ಮತ್ತೊಂದು ಉದಾಹರಣೆ ಮಾತ್ರ’ ಎಂದು CENTCOM ವಕ್ತಾರರು ತಿಳಿಸಿದ್ದಾರೆ.
ಈ ಕುರಿತು ಅವರು Al Jazeera ಅರೇಬಿಕ್ ಗೆ ಪ್ರತಿಕ್ರಿಯೆ ನೀಡಿದ್ದು, ಇರಾನ್ ಮಾಡಿರುವ ಆರೋಪಗಳನ್ನು ಅಮೆರಿಕ ಸಂಪೂರ್ಣವಾಗಿ ತಳ್ಳಿಹಾಕಿದೆ.
Next Story





