ಪಶ್ಚಿಮದಂಡೆಗೆ ಭೇಟಿ ನೀಡಿದ ರಾಜತಾಂತ್ರಿಕರ ಮೇಲೆ ಇಸ್ರೇಲ್ ನಿಂದ ಗುಂಡಿನ ದಾಳಿ: ವರದಿ

PC | AFP
ರಮಲ್ಲಾ: ಪಶ್ಚಿಮದಂಡೆಯ ಜೆನಿನ್ ನಗರಕ್ಕೆ ಬುಧವಾರ ಭೇಟಿ ನೀಡಿದ ರಾಜತಾಂತ್ರಿಕರ ಮೇಲೆ ಇಸ್ರೇಲಿ ಪಡೆಗಳು ಗುಂಡಿನ ದಾಳಿ ನಡೆಸಿರುವುದಾಗಿ ಫೆಲೆಸ್ತೀನಿಯನ್ ಪ್ರಾಧಿಕಾರ(ಪಿಎ) ಆರೋಪಿಸಿದ್ದು ಜನರ ಗುಂಪಿನತ್ತ ಇಬ್ಬರು ಯೋಧರು ರೈಫಲ್ ಗುರಿಯಾಗಿಸಿರುವ ವೀಡಿಯೊ ಬಿಡುಗಡೆಗೊಳಿಸಿದೆ.
ಇದು ಇಸ್ರೇಲ್ ಪಡೆಗಳು ಮಾಡಿದ ಘೋರ ಅಪರಾಧ. ಜೆನಿನ್ ಪ್ರಾಂತಕ್ಕೆ ಭೇಟಿ ನೀಡಿದ್ದ ಫೆಲೆಸ್ತೀನ್ ರಾಷ್ಟ್ರದ ಮಾನ್ಯತೆ ಪಡೆದಿರುವ ರಾಜತಾಂತ್ರಿಕ ನಿಯೋಗದ ಮೇಲೆ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಲಾಗಿದೆ ಎಂದು ಪಿಎ ಖಂಡಿಸಿದೆ. ಜೆನಿನ್ ನಿರಾಶ್ರಿತರ ಶಿಬಿರದ ಒಳಗಿಂದ ಪುನರಾವರ್ತಿತ ಗುಂಡಿನ ಸದ್ದು ಕೇಳಿಬಂದಿರುವುದನ್ನು ರಾಜತಾಂತ್ರಿಕರು ದೃಢಪಡಿಸಿದ್ದಾರೆ. ರಾಜತಾಂತ್ರಿಕರ ಭೇಟಿಯ ಸಂದರ್ಭ ಉಂಟಾಗಿರುವ ಅನಾನುಕೂಲತೆಗೆ ವಿಷಾದಿಸುವುದಾಗಿ ಇಸ್ರೇಲ್ ಸೇನೆ ಪ್ರತಿಕ್ರಿಯಿಸಿದೆ.
Next Story





