ಫೆಲೆಸ್ತೀನೀಯರನ್ನು ಬೆಂಬಲಿಸಲು 230 ದಶಲಕ್ಷ ಡಾಲರ್ ನಿಗದಿ: ಯುರೋಪಿಯನ್ ಕಮಿಷನ್ ಘೋಷಣೆ

PC : X
ಲಂಡನ್: ಫೆಲೆಸ್ತೀನಿನ ನಿರಾಶ್ರಿತರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಕ್ರಮ ಏಜೆನ್ಸಿಗೆ ಬೆಂಬಲವಾಗಿ 230 ದಶಲಕ್ಷ ಡಾಲರ್ ನಿಗದಿ ಪಡಿಸಿರುವುದಾಗಿ ಯುರೋಪಿಯನ್ ಕಮಿಷನ್ ಸೋಮವಾರ ಘೋಷಿಸಿದೆ.
ಶಿಕ್ಷಕರು, ನಾಗರಿಕ ಸೇವೆ ಸಲ್ಲಿಸುವವರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಂಬಳವನ್ನು ಪಾವತಿಸುವುದು ಸೇರಿದಂತೆ ಅಗತ್ಯ ಸಾರ್ವಜನಿಕ ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಫೆಲೆಸ್ತೀನಿಯನ್ ಪ್ರಾಧಿಕಾರ(ಪಿಎ)ಕ್ಕೆ 172 ದಶಲಕ್ಷ ಡಾಲರ್ ನಿಗದಿ ಪಡಿಸಲಾಗಿದೆ.
ಫೆಲೆಸ್ತೀನೀಯರಿಗೆ ನಮ್ಮ ಬೆಂಬಲವು ಸ್ಥಿರವಾಗಿ ಮುಂದುವರಿಯಲಿದೆ ಎಂದು ಯುರೋಪಿಯನ್ ಕಮಿಷನ್ ನ ಮೆಡಿಟರೇನಿಯನ್ ಕಮಿಷನರ್ ಡುಬ್ರಾವ್ಕಾ ಸುಯಿಕಾ ಹೇಳಿದ್ದಾರೆ.
Next Story





