ಗಾಝಾ ಮಧ್ಯಂತರ ಆಡಳಿತ ವ್ಯವಸ್ಥೆಯ ಭಾಗವಾಗಲು ಸಿದ್ಧ: ಯುರೋಪಿಯನ್ ಯೂನಿಯನ್

Photo Credit : AFP
ಕುವೈಟ್ ಸಿಟಿ, ಅ.7: ಗಾಝಾ ಪಟ್ಟಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ `ಶಾಂತಿ ಮಂಡಳಿ'ಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಯುರೋಪಿಯನ್ ಯೂನಿಯನ್(ಇಯು) ಬಯಸಿದೆ ಎಂದು ಯುರೋಪಿಯನ್ ಕಮಿಷನ್ ಉಪಾಧ್ಯಕ್ಷೆ ಕಾಜಾ ಕಲ್ಲಾಸ್ ಹೇಳಿದ್ದಾರೆ.
ಗಾಝಾ ಶಾಂತಿ ಯೋಜನೆಯಲ್ಲಿ ನಾವು ಕಾರ್ಯ ನಿರ್ವಹಿಸಿದ್ದೇವೆ ಮತ್ತು ಗಾಝಾ ವಿಷಯಕ್ಕೆ ಸಂಬಂಧಿಸಿ ನಮ್ಮ ಅರಬ್ ಪಾಲುದಾರರೊಂದಿಗೆ ಕೆಲಸ ಮಾಡಿದ್ದೇವೆ. ಯುರೋಪ್ ದೊಡ್ಡ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸವಿದೆ. ನಾವು ಕೂಡಾ ಆಡಳಿತ ವ್ಯವಸ್ಥೆಯ ಭಾಗವಾಗಿರುವುದು ಎಲ್ಲರ ಹಿತಾಸಕ್ತಿಗೆ ಪೂರಕ ಎಂದವರು ತಿಳಿದಿದ್ದಾರೆ. ಆದ್ದರಿಂದ ಇಸ್ರೇಲ್ ಕೂಡಾ ಇದಕ್ಕೆ ಒಪ್ಪುವ ನಿರೀಕ್ಷೆಯಿದೆ ಎಂದು ಕುವೈಟ್ನಲ್ಲಿ ನಡೆಯುತ್ತಿರುವ ಇಯು-ಗಲ್ಫ್ ಸಹಕಾರ ಮಂಡಳಿ ಸಭೆಯ ನೇಪಥ್ಯದಲ್ಲಿ ಕಲ್ಲಾಸ್ ಹೇಳಿದ್ದಾರೆ. ಯುರೋಪಿಯನ್ ಯೂನಿಯನ್ ಫೆಲೆಸ್ತೀನೀಯರಿಗೆ ನೆರವು ನೀಡುವ ಪ್ರಮುಖ ರಾಷ್ಟ್ರವಾಗಿದ್ದು ಫೆಲೆಸ್ತೀನ್ ಪ್ರಾಧಿಕಾರ ಮತ್ತು ಇಸ್ರೇಲ್ ಎರಡರೊಂದಿಗೂ ಸಂಬಂಧ ಹೊಂದಿದೆ.
Next Story





