ರೋಮ್‌ನಲ್ಲಿ ನಡೆದ FII PRIORITY Europe 2026 ಶೃಂಗಸಭೆಯಲ್ಲಿ Expertise Group ನಿಯೋಗ ಭಾಗಿ

ರೋಮ್ : ಇಟಲಿಯ ರೋಮ್‌ನಲ್ಲಿ ನಡೆದ ಮೂರು ದಿನಗಳ FII PRIORITY Europe 2026 ಶೃಂಗಸಭೆಯಲ್ಲಿ Expertise Group ಸಂಸ್ಥೆಯ ಉನ್ನತ ಮಟ್ಟದ ನಿಯೋಗ ಭಾಗವಹಿಸಿತು. ಯುರೋಪ್ ಮತ್ತು ಅದರ ವ್ಯಾಪಾರ ಪಾಲುದಾರರ ಆರ್ಥಿಕ ಭವಿಷ್ಯದ ಕುರಿತು ಚರ್ಚಿಸುವ ಉದ್ದೇಶದ ಈ ಸಮಾವೇಶದಲ್ಲಿ ಜಾಗತಿಕ ಹೂಡಿಕೆದಾರರು, ನೀತಿ ನಿರ್ಧಾರಕರು ಮತ್ತು ಉದ್ಯಮಿಗಳು ಭಾಗವಹಿಸಿದ್ದರು.
ಜೂನ್ 17ರಿಂದ 19ರವರೆಗೆ ನಡೆದ ಈ ಸಮಾವೇಶದಲ್ಲಿ Expertise Groupನ ಸಿಇಒ ಮುಹಮ್ಮದ್ ಆಸಿಫ್ ಹಾಗೂ ಸಿಸಿಒ ಮಹಮ್ಮದ್ ಅಶ್ಫಾಕ್ ನೇತೃತ್ವದ ನಿಯೋಗ ಭಾಗವಹಿಸಿದೆ. ನಿಯೋಗವು ಉತ್ಪಾದನೆ, ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ಮೂಲಸೌಕರ್ಯ, ಬಂಡವಾಳ ಹರಿವು ಸೇರಿದಂತೆ ಹಲವು ವಿಷಯಗಳ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದಾರೆ.
"Europe Reimagined: Capital, Sovereignty & Strategic Autonomy" ಈ ವರ್ಷದ ಶೃಂಗಸಭೆಯ ಪ್ರಮುಖ ಪರಿಕಲ್ಪನೆಯಾಗಿದೆ. ಆರ್ಥಿಕ ಸ್ವಾವಲಂಬನೆ, ಕೈಗಾರಿಕಾ ನೀತಿ ಮತ್ತು ದೀರ್ಘಕಾಲೀನ ಸ್ಪರ್ಧಾತ್ಮಕತೆಯ ಕುರಿತು ಸರಕಾರಗಳು ಹಾಗೂ ಉದ್ಯಮಗಳು ಹೊಸ ದೃಷ್ಟಿಕೋನದಿಂದ ಚಿಂತಿಸುತ್ತಿರುವುದನ್ನು ಇದು ಪ್ರತಿಬಿಂಬಿಸಿದೆ.
ಶೃಂಗಸಭೆಯ ವೇಳೆ Expertise ಕಂಪೆನಿಯ ನಿಯೋಗ ಜಾಗತಿಕ ಹೂಡಿಕೆದಾರರು ಮತ್ತು ಉದ್ಯಮ ಮುಖಂಡ ರೊಂದಿಗೆ ಸಭೆ ನಡೆಸಿ, ಉದಯೋನ್ಮುಖ ಮಾರುಕಟ್ಟೆಗಳ ಅವಕಾಶಗಳು ಹಾಗೂ ಮಧ್ಯಪ್ರಾಚ್ಯ, ಯುರೋಪ್ ಮತ್ತು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳ ನಡುವಿನ ಸಹಕಾರದ ಸಾಧ್ಯತೆಗಳ ಕುರಿತು ಚರ್ಚಿಸಿತು.
ಸೌದಿ ಅರೇಬಿಯಾದ ಸಾರಿಗೆ ಸಚಿವ ಸಲೇಹ್ ಬಿನ್ ನಾಸರ್ ಅಲ್-ಜಾಸರ್, ಬುರ್ಜೀಲ್ ಹೋಲ್ಡಿಂಗ್ಸ್ ಸಂಸ್ಥಾಪಕ ಶಂಶೀರ್ ವಯಾಲಿಲ್, ADES ನ ಮುಖ್ಯ ಹಣಕಾಸು ಅಧಿಕಾರಿ ಹುಸೇನ್ ಬದಾವೇ ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳನ್ನು ನಿಯೋಗವು ಭೇಟಿಯಾಗಿದೆ.
ಸೌದಿ ಅರೇಬಿಯಾದ Vision 2030 ಕಾರ್ಯಕ್ರಮದ ಪರಿಣಾಮವಾಗಿ ಮಧ್ಯಪ್ರಾಚ್ಯದ ಹೂಡಿಕೆದಾರರು ಮತ್ತು ಉದ್ಯಮ ಮುಖಂಡರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಕಂಡುಬಂದಿದ್ದು, ಸಾರ್ವಭೌಮ ಬಂಡವಾಳ, ನಿರಂತರ ಸುಧಾರಣೆ ಗಳು ಮತ್ತು ಹೊಸ ತಲೆಮಾರಿನ ಪ್ರತಿಭಾವಂತ ಮಾನವ ಸಂಪನ್ಮೂಲ ಇದರ ಬೆನ್ನೆಲುಬಾಗಿದೆ ಎಂದು ಚರ್ಚೆಗಳಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
“FII PRIORITY Europe 2026ರ ಚರ್ಚೆಗಳು ಭವಿಷ್ಯದ ಆರ್ಥಿಕತೆಗಳನ್ನು ನಿರ್ಮಿಸಲು ಸಹಭಾಗಿತ್ವ, ಸಂಶೋಧನೆ ಮತ್ತು ಪ್ರತಿಭೆ ಅಭಿವೃದ್ಧಿಯ ಮಹತ್ವವನ್ನು ಪುನರುಚ್ಚರಿಸಿವೆ. ಮಧ್ಯಪ್ರಾಚ್ಯ ಮತ್ತು ಯುರೋಪಿನ ಸಂಸ್ಥೆಗಳು ಪರಿವರ್ತನೆಯ ವೇಗವನ್ನು ಹೆಚ್ಚಿಸುತ್ತಿರುವ ಈ ಸಂದರ್ಭದಲ್ಲಿ, ಪಾಲುದಾರಿಕೆ, ಮಾನವ ಸಂಪನ್ಮೂಲ ಮತ್ತು ದತ್ತಾಂಶದ ಮೂಲಕ ಸಂಸ್ಥೆಗಳ ಬೆಳವಣಿಗೆಗೆ ನೆರವಾಗುವ ನಮ್ಮ ಬದ್ಧತೆ ಮುಂದುವರಿಯಲಿದೆ ಎಂದು ಸಿಇಒ ಮುಹಮ್ಮದ್ ಆಸಿಫ್ ತಿಳಿಸಿದ್ದಾರೆ.
ಸಂಸ್ಥೆಯು ಈ ಶೃಂಗಸಭೆಯಿಂದ ಪಡೆದ ಅನುಭವಗಳನ್ನು ತಾನು ಕಾರ್ಯನಿರ್ವಹಿಸುವ ವಿವಿಧ ಮಾರುಕಟ್ಟೆಗಳಲ್ಲಿ ವಿಸ್ತರಣಾ ಕಾರ್ಯತಂತ್ರಗಳಾಗಿ ರೂಪಾಂತರಿಸುವ ಉದ್ದೇಶ ಹೊಂದಿದೆ.
Expertise Group ಮಂಗಳೂರು ಮೂಲದ ಸೌದಿ ಅರೇಬಿಯಾ ಕೇಂದ್ರವಾಗಿರುವ ಜಾಗತಿಕ ಕೈಗಾರಿಕಾ ಮತ್ತು ಮೂಲಸೌಕರ್ಯ ಒದಗಿಸುವ ಸಂಸ್ಥೆಯಾಗಿದ್ದು, ಮಧ್ಯಪ್ರಾಚ್ಯ ಹಾಗೂ ಭಾರತದಲ್ಲಿ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಿದೆ.






