Afghanistan | ಶಾಲೆಯಲ್ಲಿ ಸ್ಫೋಟ: 7 ವಿದ್ಯಾರ್ಥಿಗಳು ಮೃತ್ಯು; ಕನಿಷ್ಠ 99 ಮಂದಿಗೆ ಗಾಯ

Photo: X.com/@RT_com
ಕಾಬೂಲ್: ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿರುವ ಕುನಾರ್ ಪ್ರಾಂತ್ಯದ ಅಂದರ್ ಸೆರ್ ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ 7 ವಿದ್ಯಾರ್ಥಿಗಳು ಮೃತಪಟ್ಟಿದ್ದು, 99ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು Reuters ವರದಿ ಮಾಡಿದೆ.
ಕುನಾರ್ ಪ್ರಾಂತೀಯ ಪೊಲೀಸ್ ಮುಖ್ಯ ಕಚೇರಿಯ ವಕ್ತಾರ ಫರೀದ್ ದೆಹ್ಕಾನ್ ಅವರು, ಅಂದರ್ ಸೆರ್ ಪ್ರಾಂತ್ಯದ ಶಾಲೆಯೊಂದರಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಸ್ಫೋಟದಲ್ಲಿ ಕೆಲವು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಆದರೆ, ಸಾವುನೋವುಗಳ ಬಗ್ಗೆ ನಿಖರ ಅಂಕಿ-ಅಂಶಗಳು ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ.
ಸ್ಫೋಟಕ್ಕೆ ನಿಖರ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆ ಕುರಿತು ಪರಿಶೀಲನೆ ನಡೆಸಲು ತನಿಖಾ ತಂಡ ಸ್ಥಳಕ್ಕೆ ತೆರಳಿದೆ ಎಂದು ಫರೀದ್ ದೆಹ್ಕಾನ್ ಅವರು ತಿಳಿಸಿದ್ದಾರೆ.
Next Story




