ಮಾಸ್ಕೋದ ಜನವಸತಿ ಕಟ್ಟಡದಲ್ಲಿ ಸ್ಫೋಟ: ಸೇನಾಧಿಕಾರಿ ಸಹಿತ ಇಬ್ಬರ ಸಾವು

ಸಾಂದರ್ಭಿಕ ಚಿತ್ರ (PTI)
ಮಾಸ್ಕೋ: ವಾಯವ್ಯ ಮಾಸ್ಕೋದ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಅರೆಸೇನಾ ಪಡೆಯ ಅಧಿಕಾರಿ ಅರ್ಮೆನ್ ಸರ್ಕಿಸ್ಯಾನ್ ಹಾಗೂ ಅವರ ಅಂಗರಕ್ಷಕ ಸಾವನ್ನಪ್ಪಿದ್ದು ಇತರ 3 ಮಂದಿ ಗಾಯಗೊಂಡಿರುವುದಾಗಿ ತುರ್ತು ಸೇವಾ ಅಧಿಕಾರಿಗಳನ್ನು ಉಲ್ಲೇಖಿಸಿ ರಶ್ಯದ ಸರ್ಕಾರಿ ಮಾಧ್ಯಮ `ತಾಸ್' ಸೋಮವಾರ ವರದಿ ಮಾಡಿದೆ.
ಸ್ಫೋಟದಿಂದ ಕಟ್ಟಡಕ್ಕೆ ತೀವ್ರ ಹಾನಿಯಾಗಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ. ಉಕ್ರೇನ್ ಮೂಲದ ಸರ್ಕಿಸ್ಯಾನ್ ರಶ್ಯದ ಪರ ಹೋರಾಟ ನಡೆಸುವ `ಅರ್ಬಟ್ ಬಟಾಲಿಯನ್'ನ ಸ್ಥಾಪಕರಾಗಿದ್ದು ಇವರು ಮೋಸ್ಕಾವ ನದಿ ತೀರದಲ್ಲಿರುವ ಕಟ್ಟಡದಲ್ಲಿರುವ ತಮ್ಮ ಕಚೇರಿಯತ್ತ ಬರುತ್ತಿದ್ದಂತೆಯೇ ಬಾಂಬ್ ಸ್ಫೋಟಗೊಂಡಿದೆ. ಸರ್ಕಿಸ್ಯಾನ್ ಹಾಗೂ ಅವರ ಅಂಗರಕ್ಷಕ ಸಾವನ್ನಪ್ಪಿದ್ದು ಇತರ ಮೂವರು ಗಾಯಗೊಂಡಿದ್ದಾರೆ. ಇದು ಉಕ್ರೇನ್ ನಡೆಸಿದ ಯೋಜಿತ ಹತ್ಯೆ ಎಂದು ರಶ್ಯ ಆರೋಪಿಸಿದೆ.
Next Story





