ಇರಾನ್ನ ಪ್ರಮುಖ ಪರಮಾಣು ಸಂಶೋಧನಾ ಕೇಂದ್ರದ ಮೇಲೆ ಇಸ್ರೇಲ್ ದಾಳಿ : ವರದಿ

File Photo: PTI
ಟೆಹರಾನ್ : ಇರಾನ್-ಇಸ್ರೇಲ್ ನಡುವಿನ ಸಂಘರ್ಷ 9ನೇ ದಿನವೂ ಮುಂದುವರಿದಿದೆ. ಇರಾನ್ನ ಪ್ರಮುಖ ಪರಮಾಣು ಸಂಶೋಧನಾ ತಾಣವಿರುವ ಇಸ್ಫಹಾನ್ನಲ್ಲಿ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ವರದಿಯಾಗಿದೆ.
ʼದೇಶದ ಅತಿದೊಡ್ಡ ಪರಮಾಣು ಸಂಕೀರ್ಣಗಳಲ್ಲಿ ಒಂದಾದ ಮಧ್ಯ ಇರಾನಿನ ನಗರವಾದ ಇಸ್ಫಹಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆʼ ಎಂದು ಇರಾನಿನ ರಾಜ್ಯ ಮಾಧ್ಯಮ ವರದಿ ಮಾಡಿದೆ.
ಇರಾನ್ನ ಇಸ್ಫಹಾನ್ ಪರಮಾಣು ಕೇಂದ್ರದ ಮೇಲೆ ಇಸ್ರೇಲ್ ದಾಳಿ ಮಾಡಿದೆ, ಆದರೆ ಯಾವುದೇ ಅಪಾಯಕಾರಿ ವಸ್ತುಗಳು ಸೋರಿಕೆಯಾಗಿಲ್ಲ ಎಂದು ಇರಾನ್ನ ಫಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇರಾನ್ ಮೇಲೆ ಹೊಸ ಅಲೆಯ ಕ್ಷಿಪಣಿಗಳನ್ನು ಉಡಾಯಿಸಿರುವುದಾಗಿ ಇಸ್ರೇಲ್ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇರಾನ್ ಕೂಡ ಇಸ್ರೇಲ್ ಮೇಲೆ ಬೆಳಗಿನ ಜಾವ ಕ್ಷಿಪಣಿ ದಾಳಿ ನಡೆಸಿದೆ. ಇದರ ಪರಿಣಾಮವಾಗಿ ಹೋಲೋನ್ ನಗರದಲ್ಲಿ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
Next Story





