ಸುಲಿಗೆ ಪ್ರಕರಣ | ಪಂಜಾಬ್ ಪೊಲೀಸ್ ಅಧಿಕಾರಿ ವಿರುದ್ಧ ಎಫ್ಬಿಐನಿಂದ ಆರೋಪ ಪಟ್ಟಿ ಸಲ್ಲಿಕೆ

ಜಗ್ಗು ಭಗವಾನ್ಪುರಿಯಾ | Photo Credit : theweek.in
ವಾಶಿಂಗ್ಟನ್, ಜು.8: ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಜಗ್ಗು ಭಗವಾನ್ಪುರಿಯಾ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಪಂಜಾಬ್ ಪೊಲೀಸ್ ಅಧಿಕಾರಿ ಗುರಿಂದರ್ಜಿತ್ ಸಿಂಗ್ ನಾಗ್ರಾ, ಅಮೆರಿಕಾದಲ್ಲಿರುವ ಕುಟುಂಬವೊಂದಕ್ಕೆ ಭಾರತದಲ್ಲಿ ಸುಳ್ಳು ಕೊಲೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿ ಸುಮಾರು 4 ಲಕ್ಷ ಡಾಲರ್ ಸುಲಿಗೆ ಮಾಡಲು ಯತ್ನಿಸಿದ್ದಾರೆ ಎಂದು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ಆರೋಪಿಸಿದೆ.
ಗುರಿಂದರ್ಜಿತ್ ಸಿಂಗ್ ಅವರು ಜಗ್ಗು ಭಗವಾನ್ಪುರಿಯಾ ಅಪರಾಧ ಜಾಲಕ್ಕೆ ಸೇರಿದ ಸುಲಿಗೆ ಸಂಚಿನ ಭಾಗವಾಗಿದ್ದರು. ಲಾಸ್ ಏಂಜಲೀಸ್ನಲ್ಲಿರುವ ಸಂತ್ರಸ್ತರಿಗೆ ಭಾರತದಲ್ಲಿ ಸುಳ್ಳು ಕೊಲೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ ಸುಲಿಗೆ ಮಾಡಲು ಯತ್ನಿಸಿದ ಆರೋಪ ಎದುರಿಸುತ್ತಿದ್ದಾರೆ. ಸಂತ್ರಸ್ತ ಕುಟುಂಬವು ಹಣ ನೀಡಲು ಒಪ್ಪಿಕೊಳ್ಳುವವರೆಗೂ ಅವರು 4 ಲಕ್ಷ ಡಾಲರ್ ಹಣಕ್ಕಾಗಿ ಪೀಡಿಸಿದ್ದಾರೆ. ನಾವು ಅವರ ಮೇಲೆ ಪ್ರಕರಣ ದಾಖಲಿಸಿದ್ದು, ಅವರನ್ನು ಯುಎಸ್ಗೆ ಹಸ್ತಾಂತರಿಸಿಕೊಳ್ಳಲಿದ್ದೇವೆ' ಎಂದು ಎಫ್ಬಿಐ ಮೂಲಗಳು ಹೇಳಿವೆ.
ಹೋಶಿಯಾರ್ಪುರ ಜಿಲ್ಲೆಯ ತಾಂಡಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಆಗಿ ನಿಯೋಜನೆಗೊಂಡಿದ್ದ ನಾಗ್ರಾ ಅವರನ್ನು ಸದ್ಯ ತನಿಖೆ ಬಾಕಿ ಇರುವ ಕಾರಣ ಪೊಲೀಸ್ ಲೈನ್ಸ್ಗೆ ವರ್ಗಾಯಿಸಲಾಗಿದೆ ಎಂದು ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಜಲಂಧರ್ ರೇಂಜ್) ನವೀನ್ ಸಿಂಗ್ಲಾ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.̧̧̧




