ಖ್ಯಾತ ಟಿವಿ ಶೋ ನಿರೂಪಕ ಮೈಕೆಲ್ ಪಾರ್ಕಿನ್ಸನ್ ನಿಧನ

Photo credit : BBC.com \ Michael Parkinson
ಲಂಡನ್: `ಚಾಟ್ ಶೋ ಕಿಂಗ್' ಎಂದೇ ಪ್ರಸಿದ್ಧರಾಗಿದ್ದ ಬ್ರಿಟನ್ ನ ಖ್ಯಾತ ಟಿವಿ ಕಾರ್ಯಕ್ರಮ ನಿರೂಪಕ ಮೈಕೆಲ್ ಪಾರ್ಕಿನ್ಸನ್ ನಿಧನರಾಗಿದ್ದಾರೆ ಎಂದು ಅವರ ಕುಟುಂಬದವರು ಗುರುವಾರ ಹೇಳಿದ್ದಾರೆ.
88 ವರ್ಷದ ಪಾರ್ಕಿನ್ಸನ್ ಅವರ ಹೆಸರು 1971ರ ಜೂನ್ ನಲ್ಲಿ ಬಿಬಿಸಿಯಲ್ಲಿ ಪ್ರಸಾರವಾದ ‘ಪಾರ್ಕಿನ್ಸನ್' ಕಾರ್ಯಕ್ರಮದ ಮೂಲಕ ಮನೆಮಾತಾಗಿತ್ತು. ಮುಹಮ್ಮದ್ ಅಲಿ, ಫ್ರೆಡ್ ಅಸ್ಟಾಯರ್, ಎಲ್ಟನ್ ಜಾನ್, ಪಾಲ್ ಮೆಕಾತ್ರ್ನಿ, ಪೀಟರ್ ಸೆಲರ್ಸ್, ಟಾಮ್ ಕ್ರೂಸ್, ಹೆಲೆನ್ ಮಿರೆನ್ ಮುಂತಾದ ಖ್ಯಾತನಾಮರನ್ನು ತಮ್ಮ ಟಿವಿ ಕಾರ್ಯಕ್ರಮದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸಂದರ್ಶಿಸಿದ್ದರು.
1971ರಿಂದ 1982ರವರೆಗೆ ಮತ್ತು 1998ರಿಂದ 2004ರವರೆಗೆ ಬಿಬಿಸಿಯಲ್ಲಿ ಕಾರ್ಯಕ್ರಮ ನಿರೂಪಿಸಿದ ಪಾರ್ಕಿನ್ಸನ್, ಬಳಿಕ ಬಿಬಿಸಿಯ ವಾಣಿಜ್ಯ ಪ್ರತಿಸ್ಪರ್ಧಿ ಐಟಿವಿಯಲ್ಲಿ 2007ರವರೆಗೆ ಕಾರ್ಯಕ್ರಮ ಮುಂದುವರಿಸಿದರು. 2008ರಲ್ಲಿ ಅವರಿಗೆ ನೈಟ್ ಪದವಿ ನೀಡಿ ಗೌರವಿಸಲಾಗಿತ್ತು.
Next Story