ಅಮೆರಿಕದಲ್ಲಿ FBI ಡೇಟಾಬೇಸ್ ಮತ್ತೆ ಹ್ಯಾಕ್

Photo Credit : AP
ವಾಶಿಂಗ್ಟನ್, ನ.21: ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ತನ್ನ ರಾಷ್ಟ್ರವ್ಯಾಪಿ ಅಪರಾಧ ಮಾಹಿತಿ ಡೇಟಾಬೇಸ್ ನಲ್ಲಿ ಸಂಭವಿಸಿರುವ ಹ್ಯಾಕಿಂಗ್ (ಮಾಹಿತಿ ಸೋರಿಕೆ) ಕುರಿತು ತನಿಖೆ ನಡೆಸುತ್ತಿದೆ. ಇದು ಅಮೆರಿಕದಾದ್ಯಂತ ಫೆಡರಲ್, ರಾಜ್ಯ ಮತ್ತು ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳು ಬಳಸುವ ಅತ್ಯಂತ ನಿರ್ಣಾಯಕ ವ್ಯವಸ್ಥೆಯಾಗಿದೆ.
ಶಂಕಿತ ಹ್ಯಾಕರ್ ಗಳಿಂದ ‘ನ್ಯಾಷನಲ್ ಕ್ರೈಮ್ ಇನ್ಫರ್ಮೇಷನ್ ಸೆಂಟರ್’ (NCIC) ವ್ಯವಸ್ಥೆಗೆ ನಡೆದಿರುವ ಈ ಅತಿಕ್ರಮಣವು, ಇತ್ತೀಚಿನ ತಿಂಗಳುಗಳಲ್ಲಿ FBIಗೆ ಸಂಬಂಧಿಸಿದಂತೆ ನಡೆದಿರುವ ಎರಡನೇ ಭದ್ರತಾ ಉಲ್ಲಂಘನೆಯಾಗಿದೆ. NCIC ಅಮೆರಿಕದ ಅತ್ಯಂತ ಪ್ರಮುಖ ಕಾನೂನು ಜಾರಿ ಮಾಹಿತಿ ಹಂಚಿಕೆ ವ್ಯವಸ್ಥೆಗಳಲ್ಲಿ ಒಂದಾಗಿದ್ದು, ಬಾಕಿ ಇರುವ ವಾರಂಟ್ ಗಳು, ತಲೆಮರೆಸಿಕೊಂಡಿರುವ ಅಪರಾಧಿಗಳು ಮತ್ತು ಹಿನ್ನೆಲೆ ಪರಿಶೀಲನೆಗಳ ಕುರಿತು ಮಾಹಿತಿ ಪಡೆಯಲು ದೇಶಾದ್ಯಂತದ ಪೊಲೀಸ್ ಇಲಾಖೆಗಳು ಹಾಗೂ ಇತರ ಸಂಸ್ಥೆಗಳು ಇದನ್ನು ಬಳಸುತ್ತವೆ.
Next Story




