ನಮ್ಮ ಸೇನೆಯ ಭಯ: ಟ್ರಂಪ್ ರನ್ನು ಅಣಕಿಸಿದ ಇರಾನ್

ಡೊನಾಲ್ಡ್ ಟ್ರಂಪ್ | Photo Credit : PTI
ಟೆಹರಾನ್, ಆ. 13: ತುರ್ಕಿಯೆಗೆ ಕಳೆದ ತಿಂಗಳು ಭೇಟಿ ನೀಡಿದ್ದಾಗ ರಹಸ್ಯವಾಗಿ ವಿಮಾನ ಬದಲಾಯಿಸಿದ ವಿವರಗಳು ಹೊರಬಿದ್ದ ನಂತರ, ಇರಾನ್ ಸರಕಾರಿ ಮಾಧ್ಯಮಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವ್ಯಂಗ್ಯ ಮಾಡಿದ್ದು, ಅಮೆರಿಕವು ಇರಾನ್ ನ ಸೈನಿಕ ಸಾಮರ್ಥ್ಯವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ ಈ ಘಟನೆಯೇ ಪುರಾವೆ ಎಂದು ಬಿಂಬಿಸಿವೆ.
`ಮತ್ತೆ, ಟ್ರಂಪ್ ಹೊಸ ಹಗರಣದಿಂದಾಗಿ ಈ ದಿನಗಳಲ್ಲಿ ಅಮೆರಿಕನ್ ಮಾಧ್ಯಮಗಳಲ್ಲಿ ಪ್ರಮುಖ ವಿಷಯವಾಗಿದ್ದಾರೆ. ಇರಾನ್ನ ಸೈನಿಕ ಶಕ್ತಿಯ ಭಯದಿಂದ ಹುಟ್ಟಿಕೊಂಡ ಹಗರಣವಿದು. ಈ ಶಕ್ತಿಯು ಕಳೆದ ತಿಂಗಳು ಟ್ರಂಪ್ ಅವರು ತುರ್ಕಿಯೆಯಿಂದ ಹಿಂತಿರುಗುವಾಗ ರಹಸ್ಯವಾಗಿ ತಮ್ಮ ವಿಮಾನವನ್ನು ಬದಲಾಯಿಸುವಂತೆ ಮಾಡಿತು. ಈ ಘಟನೆಯು ಅಮೆರಿಕ ಅಧ್ಯಕ್ಷರಿಗೆ ಉಂಟಾದ ಅವಮಾನ' ಎಂದು ಇರಾನ್ ಸರಕಾರಿ ಟೆಲಿವಿಷನ್ ನ ನಿರೂಪಕರೊಬ್ಬರು ವರ್ಣಿಸಿದ್ದಾರೆ.
ಹತ್ಯಾ ಸಂಚಿನ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವ ಅರಾಘ್ಚಿ, `ಟ್ರಂಪ್ ಈಗಾಗಲೇ ಅಮೆರಿಕವನ್ನು ನಾಶಪಡಿಸುತ್ತಿದ್ದಾರೆ. ನಾವು ಅವರನ್ನು ಹತ್ಯೆ ಮಾಡುವ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.




