ಹಾರ್ಮುಝ್ನಲ್ಲಿ ಮೂರು ಟ್ಯಾಂಕರ್ಗಳಿಗೆ ಬೆಂಕಿ: ಇರಾನ್

Photo Credit : X
ಟೆಹರಾನ್: ಗುರುವಾರ ಹಾರ್ಮುಝ್ ಜಲಸಂಧಿಯಲ್ಲಿ ಸಂಚರಿಸಲು ಯತ್ನಿಸುತ್ತಿದ್ದ ಮೂರು ಟ್ಯಾಂಕರ್ಗಳು ಸ್ಫೋಟಕಗಳಿಗೆ ಢಿಕ್ಕಿ ಹೊಡೆದು ಬೆಂಕಿಗಾಹುತಿಯಾಗಿವೆ ಎಂದು ಇರಾನ್ನ ರೆವೊಲ್ಯೂಷನರಿ ಗಾಡ್ರ್ಸ್ (ಐಆರ್ಜಿಸಿ) ಹೇಳಿದೆ.
ಹಾರ್ಮುಝ್ ಜಲಸಂಧಿಯ ಅನಧಿಕೃತ ದಕ್ಷಿಣ ಮಾರ್ಗದಲ್ಲಿ ಹಾದುಹೋಗಲು ಯತ್ನಿಸುತ್ತಿದ್ದ ನಿಯಮ ಉಲ್ಲಂಘಿಸಿದ ಮೂರು ತೈಲ ಟ್ಯಾಂಕರ್ಗಳು ಸ್ಫೋಟಕಗಳಿಗೆ ಢಿಕ್ಕಿ ಹೊಡೆದು ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿವೆ. ಈ ನೌಕೆಗಳು ತಮ್ಮ ಎಲ್ಲಾ ರೇಡಾರ್ ಮತ್ತು ನೇವಿಗೇಷನ್ ವ್ಯವಸ್ಥೆಗಳನ್ನು ಆಫ್ ಮಾಡಿದ್ದವು ಹಾಗೂ ಐಆರ್ಜಿಸಿ ನೌಕಾಪಡೆಯ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದವು ಎಂದು ಐಆರ್ಜಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಜಲಸಂಧಿಯ ಪ್ರಮುಖ ಮಾರ್ಗಗಳಲ್ಲಿದ್ದ ಸ್ಫೋಟಕಗಳನ್ನು ತೆರವುಗೊಳಿಸಲಾಗಿದೆ ಎಂದು ಅಮೆರಿಕ ಮಿಲಿಟರಿಯು ಪ್ರತಿಪಾದಿಸಿದ ಮರುದಿನವೇ ಈ ಘಟನೆ ನಡೆದಿದೆ.
Next Story




