ಫಿಲಿಪೈನ್ಸ್ ಕರಾವಳಿಯಲ್ಲಿ ನೌಕೆಗೆ ಬೆಂಕಿ: ಐವರು ಮೃತ್ಯು, 87 ಜನರು ನಾಪತ್ತೆ

Photo Credit : AP
ಮನಿಲಾ: ಫಿಲಿಪೈನ್ಸ್ನ ಪಲಾವಾನ್ ಪ್ರಾಂತದ ಪ್ರಸಿದ್ಧ ಪ್ರವಾಸಿ ತಾಣವಾದ ಕೊರಾನ್ ಕರಾವಳಿಯ ಬಳಿ ನೌಕೆಯೊಂದಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಐವರು ಮೃತಪಟ್ಟಿದ್ದಾರೆ ಮತ್ತು 87 ಜನರು ನಾಪತ್ತೆಯಾಗಿದ್ದಾರೆ ಎಂದು ಕರಾವಳಿ ಕಾವಲು ಪಡೆ ಗುರುವಾರ ತಿಳಿಸಿದೆ.
ಕೊರಾನ್ ಕರಾವಳಿಯಿಂದ ಸುಮಾರು 2.2 ಕಿಲೋಮೀಟರ್ ದೂರದಲ್ಲಿ ಎಮ್/ವಿ ಜೂನ್ ಆಸ್ಟರ್ ಎಂಬ ನೌಕೆಯಲ್ಲಿ ಬುಧವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ. ಈ ನೌಕೆಯು ಮನಿಲಾದಿಂದ ಕೊರಾನ್ಗೆ ಹೊರಟಿದ್ದಾಗ ಅದರಲ್ಲಿ 117 ಪ್ರಯಾಣಿಕರು ಮತ್ತು 17 ಸಿಬ್ಬಂದಿ ಇದ್ದರು. 38 ಪ್ರಯಾಣಿಕರು ಮತ್ತು ನಾಲ್ಕು ಸಿಬ್ಬಂದಿ ಸೇರಿದಂತೆ ಒಟ್ಟು 42 ಜನರನ್ನು ರಕ್ಷಿಸಲಾಗಿದೆ ಹಾಗೂ ಐದು ಮೃತದೇಹಗಳನ್ನು ದಡಕ್ಕೆ ತರಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಕರಾವಳಿ ಕಾವಲು ಪಡೆಯ ಕ್ಯಾಪ್ಟನ್ ನೋಮಿ ಕಾಯಾಬ್ಯಾಬ್ ಹೇಳಿದ್ದಾರೆ.
Next Story




