ಕಾಂಗೋದ ಶಾಲೆಗಳಲ್ಲಿ ಬೆಂಕಿ ದುರಂತ: ಕನಿಷ್ಠ 24 ವಿದ್ಯಾರ್ಥಿಗಳು ಮೃತ್ಯು

Photo Credit : AI
ಬುಕಾವು, ಸೆ.11: ಪೂರ್ವ ಕಾಂಗೋದ ಬುಕಾವು ನಗರದಲ್ಲಿ ಎರಡು ಅಕ್ಕಪಕ್ಕದ ಶಾಲೆಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 24 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 24 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 19 ವಿದ್ಯಾರ್ಥಿನಿಯರು ಮತ್ತು ಐದು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮನೆಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಪಕ್ಕದಲ್ಲೇ ಇದ್ದ ಎರಡು ಶಾಲೆಗಳಿಗೆ ವ್ಯಾಪಿಸಿತು ಎಂದು ವರದಿಯಾಗಿದೆ.
Next Story




