ಮಾಲ್ದೀವ್ಸ್ ತಲುಪಿದ ಭಾರತೀಯ ತಾಂತ್ರಿಕ ಸಿಬ್ಬಂದಿಯ ಮೊದಲ ತಂಡ

Photo: PTI
ಮಾಲೆ: ಮಾಲ್ದೀವ್ಸ್ ನ ವಾಯುಯಾನ ವೇದಿಕೆಯನ್ನು ನಿರ್ವಹಿಸುವ ಭಾರತೀಯ ತಾಂತ್ರಿಕ ಸಿಬ್ಬಂದಿಯ ಮೊದಲ ತಂಡ ಬುಧವಾರ ಮಾಲ್ದೀವ್ಸ್ ತಲುಪಿದೆ. ಮಾರ್ಚ್ 10ರಂದು ಮಾಲ್ದೀವ್ಸ್ ನಿಂದದ ತೆರಳುವ ಭಾರತದ ಸೇನಾ ಸಿಬ್ಬಂದಿಯ ಪ್ರಥಮ ತಂಡದ ಸ್ಥಾನದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ.
ಮಾಲೆ ಬಳಿಯ ಅದ್ದು ದ್ವೀಪದಲ್ಲಿ ಹೆಲಿಕಾಪ್ಟರ್ ಅನ್ನು ಈ ತಂಡ ನಿರ್ವಹಿಸಲಿದೆ. ಶೀಘ್ರವೇ ಬದಲಿ ಹೆಲಿಕಾಪ್ಟರ್ ಕೂಡಾ ಭಾರತದಿಂದ ಆಗಮಿಸಲಿದೆ. ಭಾರತದ ತಾಂತ್ರಿಕ ಸಿಬ್ಬಂದಿ ತಂಡವು ಹೆಲಿಕಾಪ್ಟರ್ ನಿರ್ವಹಣೆಯ ಬಗ್ಗೆ ತರಬೇತಿ ನೀಡುತ್ತದೆ. ಮಾರ್ಚ್ನಿಂದ ಮೇ ಅವಧಿಯಲ್ಲಿ ಮಾಲ್ದೀವ್ಸ್ ನಿಂದ ಭಾರತದ ಸೇನಾ ಸಿಬ್ಬಂದಿಯನ್ನು ವಾಪಾಸು ಕರೆಸಿಕೊಳ್ಳುವ ನಿರ್ಧಾರಕ್ಕೆ ಈ ತಿಂಗಳ ಆರಂಭದಲ್ಲಿ ಎರಡೂ ದೇಶಗಳು ಬಂದಿವೆ. `ಭಾರತದ ಸೇನಾ ಸಿಬ್ಬಂದಿಯ ಸ್ಥಾನದಲ್ಲಿ ತಾಂತ್ರಿಕ ಸಿಬ್ಬಂದಿಯ ತಂಡ ಎರಡು ಹೆಲಿಕಾಪ್ಟರ್ ಗಳು ಹಾಗೂ ಒಂದು ಡಾರ್ನಿಯರ್ ಯುದ್ಧವಿಮಾನದ ನಿರ್ವಹಣೆಯನ್ನು ಮುಂದುವರಿಸಲಿದೆ' ಎಂದು ಮಾಲ್ದೀವ್ಸ್ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.
Next Story





