Indonesia | ಜಾವಾ ಸಮುದ್ರದ ಮದುರಾ ದ್ವೀಪದ ಬಳಿ ಹೊತ್ತಿ ಉರಿದ ಬೋಟ್: ಐವರು ಮೃತ್ಯು; 41 ಮಂದಿ ನಾಪತ್ತೆ

Image Credit: PTI
ಜಕಾರ್ತಾ: ಜಾವಾ ಸಮುದ್ರದ ಮದುರಾ ದ್ವೀಪದ ಬಳಿ ರವಿವಾರ ಬೋಟ್ ವೊಂದರಲ್ಲಿ (ferry) ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಐವರು ಮೃತಪಟ್ಟು, 41 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇಲ್ಲಿಯವರೆಗೆ ಒಟ್ಟು 225 ಮಂದಿಯನ್ನು ರಕ್ಷಿಸಲಾಗಿದೆ ಎಂದು ಪ್ರಾಂತೀಯ ಸುರಬಯ ಶೋಧ ಮತ್ತು ರಕ್ಷಣಾ ಸಂಸ್ಥೆ ತಿಳಿಸಿದೆ.
ಸುಮೆನೆಪ್ ರೀಜೆನ್ಸಿ ಬಳಿ ಇರುವ ಜಾವಾ ಸಮುದ್ರದ ಹತ್ತಿರದ ಮದುರಾ ದ್ವೀಪದಲ್ಲಿ ಕೆಎಂ ಮುತಿಯಾರ ಸೆಂಟೋಸಾ 2 ಪ್ರಯಾಣಿಕರ ಬೋಟ್ ಗೆ ಬೆಂಕಿ ಹೊತ್ತಿಕೊಂಡಿತು ಎಂದು Weather Monitor ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಬೆಂಕಿ ಆಕಸ್ಮಿಕದ ಕಾರಣವನ್ನು ಪತ್ತೆ ಹಚ್ಚಲು ತನಿಖೆ ಪ್ರಗತಿಯಲ್ಲಿದೆ. ಮೃತ ವ್ಯಕ್ತಿಗಳ ವಿವರಗಳನ್ನು ಅಧಿಕಾರಿಗಳು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ.
ಇಂಡೋನೇಶಿಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ಬಸರ್ನಾಸ್ ಪ್ರಕಾರ, ಕೆಲವು ಪ್ರಯಾಣಿಕರು ಸಮುದ್ರಕ್ಕೆ ಜಿಗಿದಿದ್ದು, ಅವರನ್ನು ಸಮೀಪದ ಹಡಗೊಂದು ರಕ್ಷಿಸಿದೆ ಎನ್ನಲಾಗಿದೆ.
Next Story




