ಐಸಿಸ್ ದಾಳಿಯಲ್ಲಿ ಇರಾಕ್ನ ಐದು ಯೋಧರ ಸಾವು
ಸಾಂದರ್ಭಿಕ ಚಿತ್ರ
ಬಗ್ದಾದ್ : ಪೂರ್ವ ಇರಾಕ್ನಲ್ಲಿ ಸೇನಾ ನೆಲೆಯ ಮೇಲೆ ಶಂಕಿತ ಐಸಿಸ್ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಯೋಧರು ಸಾವನ್ನಪ್ಪಿದ್ದು ಇತರ 5 ಯೋಧರು ಗಾಯಗೊಂಡಿರುವುದಾಗಿ ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ದಿಯಾಲಾ ಮತ್ತು ಸಲಾಹುದ್ದೀನ್ ಪ್ರಾಂತದಲ್ಲಿ ಇರಾಕ್ ನೆಲೆಯನ್ನು ಗುರಿಯಾಗಿಸಿ ಭಯೋತ್ಪಾದಕರ ದಾಳಿ ನಡೆದಿದೆ. ತಕ್ಷಣ ಭದ್ರತಾ ಪಡೆಗಳು ಮರುದಾಳಿ ನಡೆಸಿದ್ದು ದಾಳಿಯನ್ನು ಹಿಮ್ಮೆಟ್ಟಿಸಿವೆ. ಆದರೆ ದುರದೃಷ್ಟವಶಾತ್ ನಮ್ಮ ಐವರು ಯೋಧರು ಪ್ರಾಣ ಕಳೆದುಕೊಂಡಿದ್ದು ಕನಿಷ್ಟ 5 ಯೋಧರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚುವರಿ ಭದ್ರತಾ ಪಡೆಗಳು ದಾಳಿಕೋರರ ವಿರುದ್ಧ ಕಾರ್ಯಾಚರಣೆಗೆ ಕೈಜೋಡಿಸಿವೆ ಎಂದು ವರದಿ ಹೇಳಿದೆ.
Next Story