ಫ್ಲೋರಿಡಾ | ರಸ್ತೆ ಅಪಘಾತದಲ್ಲಿ 8 ಕಾರ್ಮಿಕರ ಸಾವು, 40 ಮಂದಿಗೆ ಗಾಯ
ನ್ಯೂಯಾರ್ಕ್ : ಅಮೆರಿಕದ ಫ್ಲೋರಿಡಾದಲ್ಲಿ ಕೃಷಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ವ್ಯಾನ್ಗೆ ಡಿಕ್ಕಿಯಾಗಿ ಉರುಳಿಬಿದ್ದು 8 ಕಾರ್ಮಿಕರು ಮೃತಪಟ್ಟು ಇತರ 40 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಓರ್ಲಾಂಡೊ ನಗರದ ಉತ್ತರದಲ್ಲಿರುವ ಮರಿಯನ್ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಡುನೆಲ್ಲಾನ್ ನಗರದ ಕಲ್ಲಂಗಡಿ ಹಣ್ಣಿನ ತೋಟಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ಸು ವ್ಯಾನ್ಗೆ ಡಿಕ್ಕಿಯಾದ ಬಳಿಕ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಾಜಕಕ್ಕೆ ಡಿಕ್ಕಿಯಾಗಿ ರಸ್ತೆ ಪಕ್ಕ ಉರುಳಿಬಿದ್ದಿದೆ. ಬಸ್ಸಿನಲ್ಲಿ 53 ಕಾರ್ಮಿಕರಿದ್ದು 8 ಮಂದಿ ಮೃತಪಟ್ಟಿದ್ದಾರೆ. ಇತರ 40 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ಲೋರಿಡಾದ ಹೆದ್ದಾರಿ ಗಸ್ತು ಪೊಲೀಸರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Next Story