Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 9/11 ಮಾದರಿ ದಾಳಿಗೆ Flydubai ಸಹ–ಪೈಲಟ್...

9/11 ಮಾದರಿ ದಾಳಿಗೆ Flydubai ಸಹ–ಪೈಲಟ್ ನಿಂದ ಸಂಚು: ಇಸ್ರೇಲ್ ಮಾಧ್ಯಮಗಳಿಂದ ವರದಿ

ಪೈಲಟ್‌ ಗೆ ಕೊಡಲಿಯಿಂದ ಹಲ್ಲೆ; ವಿಮಾನ ಅಪಹರಿಸಿ ಟೆಲ್ ಅವಿವ್ ಕಟ್ಟಡಕ್ಕೆ ಢಿಕ್ಕಿ ಹೊಡೆಸುವ ಯೋಜನೆ: ತನಿಖಾಧಿಕಾರಿಗಳು

ವಾರ್ತಾಭಾರತಿವಾರ್ತಾಭಾರತಿ5 Oct 2026 8:37 AM IST
share
9/11 ಮಾದರಿ ದಾಳಿಗೆ Flydubai ಸಹ–ಪೈಲಟ್ ನಿಂದ ಸಂಚು: ಇಸ್ರೇಲ್ ಮಾಧ್ಯಮಗಳಿಂದ ವರದಿ

ಹೊಸದಿಲ್ಲಿ, ಅ.5: ಫ್ಲೈದುಬೈ ವಿಮಾನವನ್ನೇ ಮಾರಕ ಅಸ್ತ್ರವನ್ನಾಗಿ ಬಳಸಿಕೊಂಡು 9/11 ಮಾದರಿಯ ದಾಳಿ ನಡೆಸಲು ಅದರ ಸಹ–ಪೈಲಟ್ ಹಮಾಮ್ ಅಲ್–ಹಮಮಿ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಪೈಲಟ್ ಸ್ಮಿತ್ ಮಚ್ಚಾರ್ ಅವರನ್ನು ಹತ್ಯೆ ಮಾಡಿ, ವಿಮಾನದ ನಿಯಂತ್ರಣ ಪಡೆದು, ಟೆಲ್ ಅವಿವ್‌ ನ ಗಗನಚುಂಬಿ ಕಟ್ಟಡ ಅಥವಾ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿದ್ದ ಮತ್ತೊಂದು ವಿಮಾನಕ್ಕೆ ಢಿಕ್ಕಿ ಹೊಡೆಸುವುದು ಅವರ ಯೋಜನೆಯಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

29 ವರ್ಷದ ಒಮಾನ್ ಪ್ರಜೆಯಾಗಿರುವ ಅಲ್–ಹಮಮಿ ಸದ್ಯ ಯುಎಇಯಲ್ಲಿ ಬಂಧನದಲ್ಲಿದ್ದಾನೆ. ಸೆಪ್ಟೆಂಬರ್ 30ರಂದು ದುಬೈ–ಟೆಲ್ ಅವಿವ್ ವಿಮಾನದಲ್ಲಿ ಕ್ಯಾಪ್ಟನ್ ಮಚ್ಚಾರ್ ಅವರ ಮೇಲೆ ದಾಳಿ ನಡೆಸಿ ವಿಮಾನದ ನಿಯಂತ್ರಣ ಪಡೆಯಲು ಆತ ಯತ್ನಿಸಿದ್ದನು. ಇಸ್ರೇಲ್‌ನ ಪ್ರಾಥಮಿಕ ತನಿಖೆಯ ಪ್ರಕಾರ, ಈ ಸಂಚಿನಲ್ಲಿ ಅಲ್–ಹಮಮಿ ಒಬ್ಬನೇ ಭಾಗಿಯಾಗಿದ್ದರು ಎಂದು CBS News ವರದಿ ಮಾಡಿದೆ.

ಇಟಲಿಯ ‘ಕೊರಿಯರ್ ಡೆಲ್ಲಾ ಸೆರಾ’ ವರದಿ ಪ್ರಕಾರ, ಪೈಲಟ್‌ ನನ್ನು ರಹಸ್ಯವಾಗಿ ಹತ್ಯೆ ಮಾಡಿ ವಿಮಾನದ ಇಂಜಿನ್‌ ಗಳನ್ನು ಸ್ಥಗಿತಗೊಳಿಸುವುದು ಅಲ್–ಹಮಮಿಯ ಯೋಜನೆಯಾಗಿತ್ತು. ಬಳಿಕ ವಿಮಾನವನ್ನು ಟೆಲ್ ಅವಿವ್‌ ನ ಕಟ್ಟಡವೊಂದಕ್ಕೆ ಅಪ್ಪಳಿಸುವ ಯೋಜನೆಯಿತ್ತು ಎನ್ನಲಾಗಿದೆ.

ಮೊದಲು ಪೈಲಟ್ ಹತ್ಯೆ, ಬಳಿಕ ವಿಮಾನ ಅಪಹರಣ :

ಅಲ್–ಹಮಮಿ ತನಿಖಾಧಿಕಾರಿಗಳಿಗೆ ನೀಡಿರುವ ಹೇಳಿಕೆಯ ಪ್ರಕಾರ, ಪೈಲಟ್ ಮಚ್ಚಾರ್ ಅವರನ್ನು ಹತ್ಯೆ ಮಾಡಿದ ಬಳಿಕ ಲ್ಯಾಂಡಿಂಗ್ ಅನುಮತಿ ಪಡೆದು ‘ಫ್ಲೈಟ್ 1073’ ಅನ್ನು ಸಾಮಾನ್ಯವಾಗಿ ಹಾರಿಸುವಂತೆ ತೋರಿಸಬೇಕಿತ್ತು. ಬಳಿಕ ಟೆಲ್ ಅವಿವ್ ಸಮೀಪದ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿರುವ ಕಟ್ಟಡ ಅಥವಾ ಮತ್ತೊಂದು ವಿಮಾನಕ್ಕೆ ಢಿಕ್ಕಿ ಹೊಡೆಸಲು ಯೋಜಿಸಿದ್ದನು ಎಂದು ಇಸ್ರೇಲಿನ ಮಾಧ್ಯಮಗಳು ವರದಿ ಮಾಡಿವೆ.

ವಿಮಾನವು ಜೋರ್ಡಾನ್‌ ನ ವಾಯುಪ್ರದೇಶ ಪ್ರವೇಶಿಸುವವರೆಗೆ ಕಾಯುವುದು ಆತನ ಯೋಜನೆಯಾಗಿತ್ತು. ಎಚ್ಚರಿಕೆಯ ಗಂಟೆ ಬಾರಿಸುವುದನ್ನು ತಪ್ಪಿಸಿ, ದಾಳಿ ನಡೆಸಲು ಸಾಕಷ್ಟು ಸಮಯ ಪಡೆಯಲು ಈ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದ ಎನ್ನಲಾಗಿದೆ.

ಜುಲೈನಲ್ಲೇ ದಾಳಿ ನಡೆಸಲು ಅಲ್–ಹಮಮಿ ಯೋಜಿಸಿದ್ದನು. ಆದರೆ ಸಿಬ್ಬಂದಿಯೊಬ್ಬರೊಂದಿಗೆ ಇದ್ದ ಸ್ನೇಹದ ಕಾರಣ ಕೊನೆಯ ಕ್ಷಣದಲ್ಲಿ ಆ ಯೋಜನೆಯನ್ನು ಕೈಬಿಟ್ಟಿದ್ದ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

ಸೆಪ್ಟೆಂಬರ್ 30ರಂದು ಯೋಜನೆಯಂತೆ ಅಲ್–ಹಮಮಿ ಕಾಕ್‌ ಪಿಟ್‌ ನಲ್ಲಿ ಮಚ್ಚಾರ್ ಅವರ ಮೇಲೆ ‘ಕ್ರಾಶ್ ಆಕ್ಸ್’ನಿಂದ ದಾಳಿ ನಡೆಸಿದ್ದನು. ತುರ್ತು ಪರಿಸ್ಥಿತಿಯಲ್ಲಿ ಬಳಸುವ ಈ ಕೊಡಲಿಯಿಂದ ಹಲ್ಲೆ ನಡೆಸಿದ ಬಳಿಕ ವಿಮಾನದ ನಿಯಂತ್ರಣ ಪಡೆಯಲು ಯತ್ನಿಸಿದ್ದನು.

ಈ ವೇಳೆ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಕೇವಲ ಎರಡು ನಿಮಿಷಗಳಲ್ಲಿ 36,000 ಅಡಿಯಿಂದ 17,000 ಅಡಿಗೆ ಕುಸಿಯಿತು. ತೀವ್ರ ಇಳಿಕೆಯಿಂದ ವಿಮಾನದ ರಚನೆಯ ಮೇಲೆ ಭಾರಿ ಒತ್ತಡ ಉಂಟಾಗಿ, ರಡ್ಡರ್‌ ನ ಕೆಲವು ಭಾಗಗಳು ಕಳಚಿಕೊಂಡವು. ವಿಮಾನದಲ್ಲಿ 174 ಪ್ರಯಾಣಿಕರಿದ್ದರು.

ಗಾಯಗೊಂಡಿದ್ದರೂ ಮಚ್ಚಾರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಸಿಬ್ಬಂದಿ ಹಾಗೂ ಪ್ರಯಾಣಿಕರು ಕಾಕ್‌ ಪಿಟ್‌ ಗೆ ಪ್ರವೇಶಿಸಿ ಅಲ್–ಹಮಮಿ ಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.

ಬಳಿಕ ಕರ್ತವ್ಯದಲ್ಲಿರದ, ವಿಮಾನದಲ್ಲಿ ಇಬ್ಬರು ಪೈಲಟ್‌ ಗಳು ವಿಮಾನದ ನಿಯಂತ್ರಣ ವಹಿಸಿಕೊಂಡರು. ಅವರು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು. ಬಳಿಕ ಪ್ರಯಾಣಿಕರನ್ನು ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು.

ತನಿಖೆಯ ಮತ್ತೊಂದು ಮಹತ್ವದ ಅಂಶವೆಂದರೆ ಟೆಲ್ ಅವೀವ್ ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಅಲ್–ಹಮಮಿ ನೀಡಿದ್ದ ಭೇಟಿ. ಫ್ಲೈದುಬೈನಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಆತ ಇತ್ತೀಚಿನ ತಿಂಗಳುಗಳಲ್ಲಿ ಹಲವು ಬಾರಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

ಜೂನ್‌ ನಲ್ಲಿ ನಡೆದ ಭೇಟಿಯೊಂದರಲ್ಲಿ ದಾಳಿಯ ಯೋಜನೆ ರೂಪಿಸಲು ಹಾಗೂ ಅಗತ್ಯ ಮಾಹಿತಿ ಸಂಗ್ರಹಿಸಲು ಆತ ಗಮನಹರಿಸಿದ್ದ ಎನ್ನಲಾಗಿದೆ.

ವಿಮಾನ ಅಪಹರಣದ ಪ್ರಯತ್ನದ ಆರೋಪ ಸಾಬೀತಾದರೆ ಅಲ್–ಹಮಮಿಗೆ ಯುಎಇಯಲ್ಲಿ ಮರಣದಂಡನೆ ಎದುರಿಸುವ ಸಾಧ್ಯತೆಯಿದೆ. ಆ ದೇಶವು ಅತ್ಯಂತ ಕಠಿಣ ಶಿಕ್ಷೆ ಕೋರಬಹುದು. ಹೀಗಾಗಿ ಸಹ–ಪೈಲಟ್‌ ಗೆ ಮರಣದಂಡನೆ ವಿಧಿಸುವ ಸಾಧ್ಯತೆ ಇದೆ ಎಂದು ಹಿರಿಯ ಎಮಿರೇಟಿ ಮೂಲವನ್ನು ಉಲ್ಲೇಖಿಸಿ ಇಸ್ರೇಲ್‌ ನ ‘ವೈನೆಟ್’ (Ynet) ವರದಿ ಮಾಡಿದೆ.

ಆದರೂ ಈವರೆಗೆ ಯಾವುದೇ ಅಧಿಕೃತ ಶಿಕ್ಷೆ ಘೋಷಣೆಯಾಗಿಲ್ಲ. ಪ್ರಕರಣದ ತನಿಖೆ ಮುಂದುವರಿದಿದೆ.

ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಧೈರ್ಯ ತೋರಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ‘ಹೀರೋ’ ಎಂದು ಶ್ಲಾಘಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ನಾಯಕರು ಭಾರತೀಯ ಪೈಲಟ್‌ ನ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.

ಮಚ್ಚಾರ್ ಸದ್ಯ ದುಬೈನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಅಪಾಯದಿಂದ ಪಾರಾಗಿದ್ದಾರೆ. ಕಳೆದ ವಾರ ಪ್ರಧಾನಿ ಮೋದಿ ಮತ್ತು ನೆತನ್ಯಾಹು ಅವರೊಂದಿಗೆ ಅವರು ಸಂವಾದ ನಡೆಸಿ, ಘಟನೆಯ ಸರಣಿಯ ಕುರಿತು ವಿವರವಾಗಿ ಮಾತನಾಡಿದ್ದರು.

ಸೌಜನ್ಯ: Indiatoday.in

Tags

skyscrapercrash planeco-pilotflydubai
share
ವಾರ್ತಾಭಾರತಿ
ವಾರ್ತಾಭಾರತಿ
Next Story
X