Flydubai ಪೈಲಟ್ ಸ್ಮಿತ್ ಮಚ್ಚರ್ ಅಬುಧಾಬಿಗೆ ಏರ್ ಲಿಫ್ಟ್

ಪೈಲಟ್ ಸ್ಮಿತ್ ಮಚ್ಚರ್ | Photo Credit : PTI
ರಿಯಾದ್, ಅ. 2: ಫ್ಲೈದುಬೈ ವಿಮಾನದಲ್ಲಿ ಬುಧವಾರ ನಡೆದ ಕಾಕ್ ಪಿಟ್ ಸಂಘರ್ಷದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೌದಿ ಅರೇಬಿಯದಿಂದ ಅಬುಧಾಬಿಗೆ ಏರ್ ಲಿಫ್ಟ್ ಮಾಡಲಾಗಿದೆ.
ಪೈಲಟ್ ಗೆ ಸತತ ವೈದ್ಯಕೀಯ ನೆರವು ಮತ್ತು ಚೇತರಿಕೆಗಾಗಿ ಅಬುಧಾಬಿಗೆ ಸ್ಥಳಾಂತರಿಸಲಾಗಿದೆ. UAEಯಲ್ಲಿರುವ ನಮ್ಮ ರಾಯಭಾರಿ ಆಸ್ಪತ್ರೆಯಲ್ಲಿ ಕ್ಯಾಪ್ಟನ್ ಮಚ್ಚರ್ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದರು. ಇದಕ್ಕೂ ಮುನ್ನ, ಅವರು ಪೈಲಟ್ ಮಚ್ಚರ್ ಕುಟುಂಬವನ್ನು ಭೇಟಿಯಾಗಿ ಕ್ಯಾಪ್ಟನ್ ಅವರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಾಧ್ಯವಿರುವ ಎಲ್ಲ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು. ಅಬುಧಾಬಿಯಲ್ಲಿರುವ ನಮ್ಮ ರಾಯಭಾರ ಕಚೇರಿ ಮತ್ತು ದುಬೈನಲ್ಲಿರುವ ಕಾನ್ಸುಲೇಟ್ ಈ ವಿಷಯದಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Next Story




