ಮಲೇಶ್ಯಾ ಮಾಜಿ ಪ್ರಧಾನಿ ಅಬ್ದುಲ್ಲಾ ಅಹ್ಮದ್ ನಿಧನ

Image Source : AP
ಕೌಲಲಾಂಪುರ: ಮಲೇಶ್ಯಾದ ಮಾಜಿ ಪ್ರಧಾನಿ ಅಬ್ದುಲ್ಲಾ ಅಹ್ಮದ್ ಬದಾವಿ (85) ವರ್ಷ ಸೋಮವಾರ ನಿಧನರಾಗಿರುವುದಾಗಿ ಅವರ ಕುಟುಂಬದವರು ಹಾಗೂ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೌಲಲಾಂಪುರದ `ನ್ಯಾಷನಲ್ ಹಾರ್ಟ್ ಇನ್ಸ್ಟಿಟ್ಯೂಟ್'ನಲ್ಲಿ ಅಬ್ದುಲ್ಲಾ ಕೊನೆಯುಸಿರು ಎಳೆದಿದ್ದಾರೆ ಎಂದು ಅವರ ಅಳಿಯ ಹೇಳಿದ್ದಾರೆ. ಮಹಥಿರ್ ಮೊಹಮ್ಮದ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ 2003ರಲ್ಲಿ ಮಲೇಶ್ಯಾದ ಐದನೇ ಪ್ರಧಾನಿಯಾಗಿ ಅಬ್ದುಲ್ಲಾ ನೇಮಕಗೊಂಡಿದ್ದರು. 2008ರಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಮೈತ್ರಿಕೂಟ ಸಂಸತ್ನಲ್ಲಿ ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ 2009ರಲ್ಲಿ ಪದತ್ಯಾಗ ಮಾಡಿದ್ದರು.
Next Story