ವೈಟ್ ಸೋಕ್ಸ್ ದಂತಕಥೆ ಬಾಬಿ ಜೆಂಕ್ಸ್ ಇನ್ನಿಲ್ಲ

PC | (X/ @FleecedByGetz)
ವಿಶ್ವವಿಖ್ಯಾತ ವೈಟ್ ಸೋಕ್ಸ್ (ಚುಟುಕು ಬೇಸ್ಬಾಲ್) ಪಟು ಬಾಬಿ ಜೆಂಕ್ಸ್ ಶುಕ್ರವಾರ ಮೃತಪಟ್ಟಿದ್ದಾರೆ. ಅವರಿಗೆ 44 ವರ್ಷ ವಯಸ್ಸಾಗಿತ್ತು. ಹೊಟ್ಟೆಯ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರ ನಿಧನಕ್ಕೆ ಚಿಕಾಗೊ ವೈಟ್ ಸೋಕ್ಸ್ ಕಂಬನಿ ಮಿಡಿದಿದೆ. ದೇಶ ವಿಶ್ವ ಸರಣಿ ಚಾಂಪಿಯನ್ಶಿಪ್ ಗೆದ್ದ 20ನೇ ವರ್ಷಾಚರಣೆಗೆ ಸಜ್ಜಾಗುತ್ತಿದ್ದ ಸಂದರ್ಭದಲ್ಲೇ ಈ ದಂತಕಥೆ ಕೊನೆಯುಸಿರೆಳೆದಿದ್ದಾರೆ ಎಂದು ಚಿಕಾಗೋ ವೈಟ್ ಸೋಕ್ಸ್ ತಂಡ ಹೇಳಿದೆ.
ಪ್ರಮುಖ ಲೀಗ್ ಪಂದ್ಯಾವಳಿಗಾಗಿ ಚಿಕಾಗೋ ವೈಟ್ ಸೋಕ್ಸ್ ತಂಡಕ್ಕೆ 2005ರಲ್ಲಿ ಪದಾರ್ಪಣೆ ಮಾಡಿದ ಜೆಂಕ್ಸ್ 88 ವರ್ಷಗಳ ವಿಶ್ವ ಸರಣಿಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ತಮ್ಮ ತಂಡ ಪ್ರಶಸ್ತಿ ಗೆಲ್ಲಲು ಕಾರಣರಾದರು. ಹಲವು ಪ್ರಮುಖ ಟೂರ್ನಿಗಳಲ್ಲಿ ಆಧಾರಸ್ತಂಭ ಎನಿಸಿದ್ದ ಅವರು, ಹೂಸ್ಟನ್ನಲ್ಲಿ ನಡೆದ ವಿಶ್ವ ಸರಣಿ ನಾಲ್ಕನೇ ಗೇಮ್ನಲ್ಲಿ ರೆಡ್ ಸೋಕ್ಸ್ ವಿರುದ್ಧ ಎಲ್ಡಿಎಸ್ ಸ್ವೀಪ್ ಸಾಧಿಸಿದ್ದರು.
ಅತಿವೇಗದ ಬಾಲ್ಗೆ ಹೆಸರಾದ ಅವರು ಒತ್ತಡದ ಸಂದರ್ಭದಲ್ಲಿ ಎಂಎಲ್ಬಿ ತಂಡದ ಅತ್ಯುತ್ತಮ ಕ್ಲೋಸರ್ ಖ್ಯಾತಿಗೆ ಪಾತ್ರರಾದರು. 2006 ಮತ್ತು 2007ರಲ್ಲಿ ಅವರು ಆಲ್ ಸ್ಟಾರ್ ಗೌರವಕ್ಕೆ ಭಾಜನರಾದರು. ಒಂದು ವರ್ಷದಲ್ಲಿ 40 ಸೇವ್ ಮಾಡಿದ್ದ ಅವರು, ಆ ಸೀಸನ್ಗಳಲ್ಲಿ ತಂಡದ ಗೆಲುವಿನ ರೂವಾರಿ ಎನಿಸಿದ್ದರು. ಆರು ಸೀಸನ್ಗಳಲ್ಲಿ 173 ಸೇವ್ ಮಾಡಿದ್ದ ಅವರು 3.40 ಇಅರ್ಎ ಗಳಿಸಿದ್ದರು. 2007ರಲ್ಲಿ ಸತತವಾಗಿ 41 ಬ್ಯಾಟರ್ಗಳನ್ನು ನಿವೃತ್ತಿಗೊಳಿಸಿದ್ದ ದಾಖಲೆ ಸರಿಗಟ್ಟಿದ್ದ ಜೆಂಕ್ಸ್ ಅವರ ದಾಖಲೆಯನ್ನು ಅವರದ್ದೇ ತಂಡದಮಾರ್ಕ್ ಬ್ಯೂರ್ಲ್ ಎರಡು ವರ್ಷ ಬಳಿಕ ಮುರಿದಿದ್ದರು.
ಚಿಕಾಗೊ ತಂಡದಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡುತ್ತಿದ್ದ ಬಾಬಿ ಜೆಂಕ್ಸ್ ಬೋಸ್ಟನ್ ರೆಡ್ ಸೋಕ್ಸ್ ಸೇರಿದ ಬಳಿಕ ಗಾಯದ ಸಮಸ್ಯೆಗಳನ್ನು ಎದುರಿಸಿದರು. 2011ರಲ್ಲಿ ಆರೋಗ್ಯ ಸಮಸ್ಯೆ ಕಾರಣದಿಂದ ಅವರು ಎಂಎಲ್ಬಿ ವೃತ್ತಿಗೆ ವಿದಾಯ ಹೇಳಿದರು. ಪ್ರಮುಖ ಟೂರ್ನಿಗಳಿಗೆ ವಿದಾಯ ಹೇಳಿದರೂ, ಇತರ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅವರು 2024ರಲ್ಲಿ ಬೇಸ್ಬಾಲ್ಗೆ ಮರಳಿ ವಿಂಡಿ ಸಿಟಿ ಥಂಡರ್ಬೋಲ್ಟ್ ತಂಡವನ್ನು ಇಂಡೆಪೆಂಡೆಂಟ್ಲೀಗ್ನಲ್ಲಿ ಮುನ್ನಡೆಸಿದರು.
Former All-Star closer Bobby Jenks dies at 44 https://t.co/FpByqu4ouP #GoHalos #bhive
— BHIVE Angels Bee (@Angelsblogger12) July 5, 2025