ಪಶ್ಚಿಮ ಇರಾನ್ನಲ್ಲಿ ಇಂಧನ ಟ್ಯಾಂಕರ್ ಸ್ಫೋಟ: 11 ಜನರು ಮೃತ್ಯು

Photo Credit : AP
ಟೆಹರಾನ್: ಪಶ್ಚಿಮ ಇರಾನ್ನಲ್ಲಿ ಇಂಧನ ಸಾಗಿಸುವ ಟ್ಯಾಂಕರ್ ಸ್ಫೋಟಗೊಂಡು 11 ಜನರು ಮೃತಪಟ್ಟಿದ್ದು, ಏಳು ಜನರು ಗಾಯಗೊಂಡಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಮಾಧ್ಯಮ ತಿಳಿಸಿದೆ.
ರಾಜಧಾನಿ ಟೆಹರಾನ್ನಿಂದ ಪಶ್ಚಿಮದಲ್ಲಿರುವ ಸನಂದಾಜ್ ನಗರದ ಸಮೀಪದ ಸಂಚಾರ ಪೊಲೀಸ್ ಠಾಣೆಯ ಬಳಿ ಶನಿವಾರ ತಡರಾತ್ರಿ ಟ್ಯಾಂಕರ್ ಇತರ ಕಾರುಗಳಿಗೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ ಎಂದು ವರದಿಯಾಗಿದೆ. ಬ್ರೇಕ್ ವ್ಯವಸ್ಥೆಯಲ್ಲಾದ ದೋಷವೇ ಈ ಅಪಘಾತಕ್ಕೆ ಕಾರಣ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
Next Story




