ಪೂರ್ವಭಾವಿ ಷರತ್ತುಗಳಿಲ್ಲದ ಗಾಝಾ ಮಾತುಕತೆ ದೋಹಾದಲ್ಲಿ ಪ್ರಾರಂಭ: ಹಮಾಸ್

ಸಾಂದರ್ಭಿಕ ಚಿತ್ರ | PC : NDTV
ದೋಹ: ಗಾಝಾದಲ್ಲಿನ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದಿಂದ ಇಸ್ರೇಲ್ನೊಂದಿಗಿನ ಹೊಸ ಸುತ್ತಿನ ಪರೋಕ್ಷ ಮಾತುಕತೆ ಖತರ್ ರಾಜಧಾನಿ ದೋಹದಲ್ಲಿ ಯಾವುದೇ ಪೂರ್ವಭಾವಿ ಷರತ್ತುಗಳಿಲ್ಲದೆ ಶನಿವಾರ ಪ್ರಾರಂಭಗೊಂಡಿದೆ ಎಂದು ಹಮಾಸ್ನ ಉನ್ನತ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.
ಹೊಸ ಸುತ್ತಿನ ಮಾತುಕತೆ ಎರಡೂ ಕಡೆಯಿಂದ ಯಾವುದೇ ಪೂರ್ವಭಾವೀ ಷರತ್ತುಗಳಿಲ್ಲದೆ ಪ್ರಾರಂಭಗೊಂಡಿದೆ ಮತ್ತು ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಮಾತುಕತೆ ಮುಕ್ತವಾಗಿದೆ. ಹಮಾಸ್ ಎಲ್ಲಾ ವಿಷಯಗಳ ಬಗ್ಗೆಯೂ, ವಿಶೇಷವಾಗಿ ಯುದ್ಧವನ್ನು ಅಂತ್ಯಗೊಳಿಸುವುದು, ಇಸ್ರೇಲ್ ಹಿಂದಕ್ಕೆ ಸರಿಯುವುದು ಮತ್ತು ಕೈದಿಗಳ ವಿನಿಮಯ ಸೇರಿದಂತೆ, ತನ್ನ ನಿಲುವನ್ನು ಪ್ರಸ್ತುತಪಡಿಸುತ್ತದೆ ಎಂದು ಹಮಾಸ್ ಅಧಿಕಾರಿ ಹೇಳಿರುವುದಾಗಿ ವರದಿಯಾಗಿದೆ.
Next Story





