ಗಾಝಾ: ಇಸ್ರೇಲ್ ದಾಳಿಯಲ್ಲಿ ಮಕ್ಕಳ ಸಹಿತ 17 ಮಂದಿ ಮೃತ್ಯು

PC : aljazeera.com
ಗಾಝಾ: ರವಿವಾರ ಗಾಝಾದಲ್ಲಿ ಇಸ್ರೇಲ್ ನ ವೈಮಾನಿಕ ಮತ್ತು ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳ ಸಹಿತ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಹೇಳಿದೆ.
ಗಾಝಾ ಪಟ್ಟಿಯ ಸುತ್ತಮುತ್ತಲಿನ ಐದು ಪ್ರದೇಶಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ನೆರವು ವಿತರಣಾ ಕೇಂದ್ರದ ಬಳಿ ಇಸ್ರೇಲ್ ನಡೆಸಿದ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಿಕೆ ತಿಳಿಸಿದೆ.
Next Story





