ಪತನದ ಅಂಚಿನಲ್ಲಿ ಗಾಝಾ ಯುದ್ಧವಿರಾಮ ಒಪ್ಪಂದ?

ಡೊನಾಲ್ಡ್ ಟ್ರಂಪ್ | Photo Credit : PTI
ಒಪ್ಪಂದ ಉಲ್ಲಂಘನೆ: ಇಸ್ರೇಲ್-ಹಮಾಸ್ ಪರಸ್ಪರ ಆರೋಪ
ಗಾಝಾ, ಅ.17: ಗಾಝಾದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಜಾರಿಗೆ ಬಂದ ಕದನ ವಿರಾಮ ಒಪ್ಪಂದ ವಿಫಲಗೊಳ್ಳುವ ಭೀತಿ ಎದುರಾಗಿದ್ದು ಕದನ ವಿರಾಮ ಉಲ್ಲಂಘಿಸಿರುವ ಬಗ್ಗೆ ಹಮಾಸ್ ಮತ್ತು ಇಸ್ರೇಲ್ ಪರಸ್ಪರ ಆರೋಪಿಸಿವೆ.
ಕದನ ವಿರಾಮ ಜಾರಿಗೆ ಬಂದ ಕೇವಲ 6 ದಿನಗಳಲ್ಲಿಯೇ ಇಸ್ರೇಲ್ ಪಡೆ ಕನಿಷ್ಠ 24 ಫೆಲೆಸ್ತೀನೀಯರನ್ನು ಹತ್ಯೆ ನಡೆಸಿರುವುದಾಗಿ ಹಮಾಸ್ ಆರೋಪಿಸಿದೆ. ಹಮಾಸ್ ಒಪ್ಪಂದದ ಪ್ರಕಾರ, ಒತ್ತೆಯಾಳುಗಳ ಮೃತದೇಹಗಳನ್ನು ಹಸ್ತಾಂತರಿಸದೆ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಇಸ್ರೇಲ್ ಆರೋಪಿಸಿದೆ.
ಒತ್ತೆಯಾಳುಗಳ ಮೃತದೇಹಗಳನ್ನು ಹಮಾಸ್ ಹಸ್ತಾಂತರಿಸದಿದ್ದರೆ ಕದನ ವಿರಾಮ ಒಪ್ಪಂದವನ್ನು ಕೊನೆಗೊಳಿಸುವಂತೆ ಒತ್ತೆಯಾಳುಗಳ ಕುಟುಂಬದವರು ಇಸ್ರೇಲ್ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಮಧ್ಯೆ, ತಾನು ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿದ್ದು ನಾಪತ್ತೆಯಾಗಿರುವ ಒತ್ತೆಯಾಳುಗಳ ಮೃತದೇಹಗಳನ್ನು ಪತ್ತೆಹಚ್ಚಲು ಸಮಯಾವಕಾಶದ ಅಗತ್ಯವಿದೆ ಎಂದು ಹಮಾಸ್ ಪ್ರತಿಪಾದಿಸಿದೆ.
Next Story





