ಗಾಝಾ : ಇಸ್ರೇಲ್ ದಾಳಿಗೆ 21 ಮಂದಿ ಬಲಿ

Photo | Reuters
ಗಾಝಾ ನಗರ,ಜು.23: ಗಾಝಾದಲ್ಲಿ ಮಂಗಳವಾರ ತಡರಾತ್ರಿ ಹಾಗೂ ಬುಧವಾರ ನಸುಕಿನ ಜಾವದಲ್ಲಿ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದು, ಅವರಲ್ಲಿ ಅರ್ಧಾಂಶಕ್ಕಿಂತಲೂ ಅಧಿಕ ಮಂದಿ ಮಹಿಳೆಯರು ಹಾಗೂ ಮಕ್ಕಳೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಗಾಝಾ ನಗರ ಹಾಗೂ ಉತ್ತರ ಗಾಝಾದಲ್ಲಿ ತನ್ನ ಪಡೆಗಳು ಸಂಘರ್ಷನಿರತವಾಗಿದ್ದು, ಜಬಾಲಿಯಾದಲ್ಲಿ ನಡೆದ ಕದನ ಹಾಗೂ ವಾಯುದಾಳಿಗಳಲ್ಲಿ ಹಲವಾರು ಹಮಾಸ್ ಹೋರಾಟಗಾರರು ಸಾವನ್ನಪ್ಪಿದ್ದಾರೆಂದು ಇಸ್ರೇಲ್ ಸೇನೆ ಬುಧವಾರ ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಮಧ್ಯೆ ಗಾಝಾದ ಫೆಲೆಸ್ತೀನ್ ಸಂತ್ರಸ್ತರಿಗೆ ಅಧಿಕ ನೆರವನ್ನು ಒದಗಿಸುವಂತೆ ಮತ್ತು ಹಸಿವಿನಿಂದ ಬಳಲುತ್ತಿರುವ ಫೆಲೆಸ್ತೀನ್ ನಿರಾಶ್ರಿತರು ಶೋಚನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆಂಬುದಾಗಿ ಎಚ್ಚರಿಸುವ ಪತ್ರವೊಂದನ್ನು ನೂರಕ್ಕೂ ಅಧಿಕ ಮಾನವಹಕ್ಕುಗಳ ಸಂಘಟನೆಗಳು ಹಾಗೂ ದತ್ತಿಸಂಸ್ಥೆಗಳು, ಬುಧವಾರ ಬಿಡುಗಡೆಗೊಳಿಸಿವೆ.
ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ ಇಸ್ರೇಲ್- ಹಮಾಸ್ ಸಂಘರ್ಷದಲ್ಲಿ 59 ಸಾವಿರಕ್ಕೂ ಅಧಿಕ ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.







