ಗಾಝಾ: ಇಸ್ರೇಲ್ ಡ್ರೋನ್ ದಾಳಿಯಲ್ಲಿ ಇಬ್ಬರು ಮಕ್ಕಳು ಮೃತ್ಯು

Photo Credit : aljazeera.com
ಗಾಝಾ: ದಕ್ಷಿಣ ಗಾಝಾ ಪಟ್ಟಿಯ ಖಾನ್ ಯೂನಿಸ್ ನಗರದ ಪೂರ್ವದಲ್ಲಿರುವ ಬನಿ ಸುಹೈಲಾ ಗ್ರಾಮದ ಮೇಲೆ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ಫೆಲೆಸ್ತೀನಿಯನ್ ಮಕ್ಕಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಶನಿವಾರ ಬೆಳಿಗ್ಗೆ ಅಲ್-ಫರಾಬಿ ಶಾಲೆಯ ಬಳಿ ನಾಗರಿಕರ ಗುಂಪಿನ ಮೇಲೆ ಇಸ್ರೇಲ್ ಡ್ರೋನ್ಗಳು ಬಾಂಬನ್ನು ಹಾಕಿದ್ದು ಇಬ್ಬರು ಬಾಲಕರು(ಸಹೋದರರು) ತೀವ್ರ ಗಾಯಗೊಂಡಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನ ಇಸ್ರೇಲ್ ಪಡೆ ಗಾಝಾದ ಹಲವು ಭಾಗಗಳಲ್ಲಿ ನೆಲ, ನೌಕಾ ಮತ್ತು ವಾಯುದಾಳಿಗಳನ್ನು ನಡೆಸಿದೆ.
ಖಾನ್ ಯೂನಿಸ್ನ ಈಶಾನ್ಯದ ಅಲ್-ಖರಾರ ನಗರದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೂವರು ಫೆಲೆಸ್ತೀನೀಯರು ಗಾಯಗೊಂಡಿದ್ದಾರೆ. ಶನಿವಾರ ಬೆಳಿಗ್ಗೆ ಗಾಝಾ ನಗರದ ಪೂರ್ವದ ತುಫಾ, ದಕ್ಷಿಣ ಗಾಝಾದ ರಫಾ ನಗರದ ಪೂರ್ವದ ಪ್ರದೇಶಗಳ ಮೇಲೆಯೂ ಇಸ್ರೇಲ್ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
Next Story





